ಬೆಳ್ತಂಗಡಿ: ಈ ವರ್ಷದ ರೋಟರಿ ಕ್ಲಬ್ ವಲಯ ಮಟ್ಟದ ಕ್ರಿಕೆಟ್ ಸ್ಪರ್ಧೆಯನ್ನು ನಡೆಸುವ ಜವಾಬ್ದಾರಿಯನ್ನು, ಬೆಳ್ತಂಗಡಿ ರೋಟರಿ ಕ್ಲಬ್ ಗೆ ವಹಿಸಲಾಗಿದ್ದು, ಈ ಸ್ಪರ್ಧೆಯನ್ನು ಉಜಿರೆಯ ಅಜ್ಜರ ಕಲ್ಲು ಮೈದಾನದಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆಸಲಾಯಿತು.

ಇದನ್ನೂ ಓದಿ: 🔴ಕಾಶಿಪಟ್ಣ: ಗರೋಡಿ ಫ್ರೆಂಡ್ಸ್ (ರಿ) ಕಾಶಿಪಟ್ಣ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ
ಕಾರ್ಯಕ್ರಮದ ಉದ್ಛಾಟನೆಯನ್ನು ಉಜಿರೆಯ ಸಂಧ್ಯಾ ಟ್ರೇಡರ್ಸ್ ಮಾಲಕ ಶ್ರೀ ರಾಜೇಶ್ ಪೈಯವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಬೆಳ್ತಂಗಡಿ ರೋಟರಿ ಕ್ಲಬ್ ತುಂಬಾ ಜನ ಹಿತ ಕಾರ್ಯಕ್ರಮಗಳನ್ನು ನಡೆಸುವುದರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ, ಅದರ ಜತೆಗೆ ಆರೋಗ್ಯಕರ ಇಂತಹ ಪಂದ್ಯಾಟಗಳು ಕೂಡ ತುಂಬಾ ಅವಶ್ಯಕ ಎಂದು ನುಡಿದರು. ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೊ. ಪ್ರೊ. ಪ್ರಕಾಶ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಅಸಿಸ್ಟೆಂಟ್ ಗವರ್ನರ್ ಡಾ. ಎ. ಜಯಕುಮಾರ್ ಶೆಟ್ಟಿ, ಬೆನಕ ಆಸ್ಪತ್ರೆಯ ಮಾಲಕ ರೋ. ಡಾ. ಗೋಪಾಲಕೃಷ್ಣ ಮತ್ತು ವರಾಹಿ ಬಿಲ್ಡರ್ಸ್ ಮಾಲಕ ಶ್ರೀ ಬಸವರಾಜ, ಕಾರ್ಯದರ್ಶಿ ಡಾ ಎಂ ಎಂ ದಯಾಕರ್, ರೋಟರಿ ಸ್ಪೋರ್ಟ್ಸ ಚೆಯರ್ ಮ್ಯಾನ್ ರೊ. ಆದರ್ಶ ಕಾರಂತರು ಭಾಗವಹಿಸಿದರು.
ವಲಯ ನಾಲ್ಕರಡಿಯಲ್ಲಿ ಬರುವ ರೋಟರಿ ಕ್ಲಬ್ ಗಳಿಗೆ ನಡೆದ ಈ ಸ್ಪರ್ಧೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗುರುವಾಯನ ಕೆರೆಯ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರು ವಹಿಸಿ, ಇಂತಹ ಕಾರ್ಯಕ್ರಮಗಳು ರೋಟರಿ ಕ್ಲಬ್ ನಡುವಿನ ಬಾಂಧವ್ಯವನ್ನು ಹೆಚ್ಚಿಸಲು ಸಹಕಾರಿ ಎಂದು ಹೇಳಿದರು.

ಫಲಿತಾಂಶ:
ಪ್ರಥಮ ಬಹುಮಾನವನ್ನು ರೋಟರಿ ಕ್ಲಬ್ ಪುತ್ತೂರು ಸಿಟಿ ಗಳಿಸಿದ್ದು, ದ್ವಿತೀಯ ಬಹುಮಾನವನ್ನು ಮೂಡಬಿದ್ರೆ ಟೆಂಪಲ್ ಟೌನ್ ರೋಟರಿ ಕ್ಲಬ್ ಪಡೆದರು. ಇದಲ್ಲದೆ ಅತ್ಯುತ್ತಮ ದಾಂಡಿಗ ರೋಟರಿ ಕ್ಲಬ್ ಪುತ್ತೂರು ಸಿಟಿಯ ಲೋಹಿತ್ ಕುಮಾರ್, ಅತ್ಯುತ್ತಮ ಬೌಲರ್ ರೋಟರಿ ಕ್ಲಬ್ ಪುತ್ತೂರು ಸಿಟಿಯ ಕಾರ್ತಿಕ್ ರೈ,
ಅತ್ಯುತ್ತಮ ಫೀಲ್ಡರ್ ರೋಟರೀ ಕ್ಲಬ್ ಪುತ್ತೂರು ಸಿಟಿಯ ಕವನ್ ನಾಯ್ಕ, ಅತ್ಯುತ್ತಮ ವಿಕೇಟ್ ಕೀಪರ್ ರೋಟರಿ ಕ್ಲಬ್ ಮೂಡಬಿದ್ರೆ ಟೆಂಪಲ್ ಟೌನಿನ ವಿಶು ಪೂಹಾರಿ, ಮ್ಯಾನ್ ಆಫ್ ದಿ ಸಿರೀಸ್ ರೋಟರಿ ಕ್ಲಬ್ ಪುತ್ತೂರು ಸಿಟಿಯ ಲೋಹಿತ್ ಕುಮಾರ್ ಪಡೆದರು.




