ಉಜಿರೆ:(ನ.17)ಪೈಂಟಿಂಗ್ ಕೆಲಸ ಮಾಡುವಾಗ ಸುಮಾರು 18 ಅಡಿ ಎತ್ತರದಿಂದ ಕುಸಿದುಬಿದ್ದು ತಲೆಯ ಭಾಗ ಹಾಗೂ ಕುತ್ತಿಗೆಯ ಸ್ಪೈನಲ್ ಕಾರ್ಡ್(spinal cord) ಸಂಪೂರ್ಣವಾಗಿ ಮುರಿತಕ್ಕೊಳಗಾಗಿದ್ದು

ಕಳೆದ ಒಂದು ತಿಂಗಳಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೆಂಜಾಳ ನಿವಾಸಿಯಾದ ಪ್ರಮೋದ್ ಗೌಡ (37ವ) ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನ.17ರಂದು ನಿಧನರಾಗಿದ್ದಾರೆ.





