ಬೆಳ್ತಂಗಡಿ: ಸೇವಾಭಾರತಿಯ ಪ್ರಮುಖ ಮೂರು ಯೋಜನೆಗಳಿಗೆ ಸಂಚಾಲಕರನ್ನು ಇತ್ತೀಚೆಗೆ ನೇಮಕ ಮಾಡಲಾಗಿದೆ. ಸೇವಾಧಾಮ ಯೋಜನೆಯ ಸಂಚಾಲಕರಾಗಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದ ಸೃಷ್ಟಿ ಪುರಂದರ ರಾವ್ ರವರನ್ನು ಮುಂದುವರೆಸಲಾಗಿದೆ.

ಇದನ್ನೂ ಓದಿ: ⭕ಕಡಬ: ನೇಣುಬಿಗಿದುಕೊಂಡು ಚೇತನ್ ಲಾರೆನ್ಸ್ ಆತ್ಮಹತ್ಯೆ
ಆರೋಗ್ಯಮ್ ಯೋಜನೆಗೆ ನೇತ್ರಾವತಿಯ ಅಖಿಲೇಶ್ ಶೆಟ್ಟಿಯವರನ್ನು ಸಂಚಾಲಕರನ್ನಾಗಿ ನೇಮಕ ಮಾಡಲಾಗಿದ್ದು, ಸಬಲಿನಿ ಯೋಜನೆಗೆ ಇತ್ತೀಚೆಗೆ ಶ್ರೀ ದುರ್ಗಾ ಮಾತೃ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾದ ಪಿಜತ್ತನಡ್ಕದ ಶ್ರೀಮತಿ ಮಮತಾ ಬಿ ಯವರನ್ನು ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ.
ಸೇವಾಧಾಮ ಯೋಜನೆಯಡಿಯಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ಸೌತಡ್ಕದಲ್ಲಿ ಸೇವಾಧಾಮ ಪುನಶ್ಚೇತನ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಸಬಲಿನಿ ಯೋಜನೆಯಡಿ ಉಚಿತ ಟೈಲರಿಂಗ್ ತರಬೇತಿಗಳನ್ನು ನೀಡುತ್ತಿದ್ದು, ಆರೋಗ್ಯಮ್ ಯೋಜನೆಯಡಿ ರಕ್ತದಾನ ಶಿಬಿರಗಳು ಹಾಗೂ ಆಂಬುಲೆನ್ಸ್ ಸೇವೆ ಅನುಷ್ಠಾನಗೊಳ್ಳುತ್ತಿದೆ.





