Thu. Nov 20th, 2025

Purushottam Bilimale: ಯಕ್ಷಗಾನ ಕಲಾವಿದರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಬಿಳಿಮಲೆ – ಪುರುಷೋತ್ತಮ ಬಿಳಿಮಲೆ ಹೇಳಿಕೆಯಿಂದ ಯಕ್ಷಗಾನ ಕಲೆಗೆ ಅಪಮಾನ: ಬಿ.ವೈ. ವಿಜಯೇಂದ್ರ

Purushottam Bilimale: ಯಕ್ಷಗಾನ ಕಲಾವಿದರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಪುರುಷೋತ್ತಮ ಬಿಳಿಮಲೆ ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

ಇದನ್ನೂ ಓದಿ: 💐ಬೆಳ್ತಂಗಡಿ: ಸೇವಾಭಾರತಿಯ 3 ಯೋಜನೆಗಳಿಗೆ ಸಂಚಾಲಕರ ನೇಮಕ


ಅಟಲ್ ವಿರಾಸತ್ ಕಾರ್ಯಕ್ರಮಕ್ಕಾಗಿ ಪುತ್ತೂರಿಗೆ ಆಗಮಿಸಿರುವ ವಿಜಯೇಂದ್ರ ಮಾಧ್ಯಮದ ಪ್ರಶ್ನೆಗೆ, ಬಿಳಿಮಲೆಯ ಹೇಳಿಕೆ ಕರಾವಳಿಯ ಕಲೆ, ಸಂಸ್ಕೃತಿ ಮಾತ್ರವಲ್ಲ, ಇಡೀ ಹಿಂದೂ ಸಮಾಜಕ್ಕೆ ಮಾಡಿದ ಅವಮಾನ. ಯಕ್ಷಗಾನವನ್ನು ಹಿಂದು ಸಮಾಜ ಪೂಜ್ಯ ಭಾವನೆಯಿಂದ ನೋಡುತ್ತದೆ. ಬಿಜೆಪಿ, ಕಾಂಗ್ರೆಸ್ ಅಂತ ಅಲ್ಲ, ಎಲ್ಲ ಜನರೂ ಪೂಜ್ಯ ಭಾವದಿಂದ ನೋಡುತ್ತಾರೆ. ಯಕ್ಷಗಾನ ಬಗ್ಗೆ ಈ ರೀತಿಯ ಹೇಳಿಕೆ ನೀಡಿ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಅವರ ಹೇಳಿಕೆಯು ಕಾಂಗ್ರೆಸ್ ಪಕ್ಷದ ಸಂಸ್ಕೃತಿಯನ್ನು ತೋರಿಸಿಕೊಡುತ್ತದೆ.


ಕಾಂಗ್ರೆಸ್ ಪಕ್ಷಕ್ಕೆ ಹಿಂದೂ ಸಂಸ್ಕೃತಿ ಬಗ್ಗೆ ಕಿಂಚಿತ್ ಗೌರವ ಇದ್ದರೆ ಈ ಕೂಡಲೇ ಅವರಿಂದ ರಾಜಿನಾಮೆ ಪಡೀಬೇಕು. ಮುಖ್ಯಮಂತ್ರಿಯವರು ಕೂಡಲೇ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿ ಸರ್ಕಾರದ ಮರ್ಯಾದೆ ಉಳಿಸಬೇಕು ಎಂದು ವಿಜಯೇಂದ್ರ ಹೇಳಿದ್ದಾರೆ. ಮೈಸೂರಿನಲ್ಲಿ ಕಾರ್ಯಕ್ರಮ ಒಂದರಲ್ಲಿ ಮಾತನಾಡಿರುವ ಪುರುಷೋತ್ತಮ ಬಿಳಿಮಲೆ, ಯಕ್ಷಗಾನ ಕಲಾವಿದರು ಸಲಿಂಗಿಗಳು ಎನ್ನುವ ರೀತಿ ಮಾತನಾಡಿದ್ದರು.

Leave a Reply

Your email address will not be published. Required fields are marked *