ಧರ್ಮಸ್ಥಳ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ ಶಾಲೆಯ ದಾನಿಗಳಾದ ಶ್ರೀಯುತ ರಾಧಾಕೃಷ್ಣ ಗುಲ್ಲೋಡಿ ಅವರ ಸಹಕಾರದಿಂದ ದಿನಾಂಕ 21.11 25 ಶುಕ್ರವಾರದಂದು ಯುಕೆಜಿ ಕೊಠಡಿಗೆ ಶಿಲಾನ್ಯಾಸ ಕಾರ್ಯಕ್ರಮವನ್ನು

ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾದ ಶ್ರೀಯುತ ಪಿ ಶ್ರೀನಿವಾಸ ರಾವ್ ಗ್ರಾಮ ಪಂಚಾಯತ್ ಧರ್ಮಸ್ಥಳ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ ನಂದ ರವರ ಉಪಸ್ಥಿತಿಯಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಶ್ರೀಯುತ ಹರೀಶ್ ಸುವರ್ಣ ಸದಸ್ಯರು ಮತ್ತು ಶ್ರೀಮತಿ ಭಾರತಿ ಸದಸ್ಯರು ಗ್ರಾಮ ಪಂಚಾಯತ್ ಧರ್ಮಸ್ಥಳ,
ಗೌರವ ಸಲಹೆಗಾರರಾದ ಶ್ರೀಯುತ ಸುಂದರ ಗೌಡ ಪುಡ್ಕೆತು, ಶ್ರೀಯುತ ನವೀನ್ ಚಂದ್ರ ಶೆಟ್ಟಿ, ಶ್ರೀಯುತ ರಾಜೇಂದ್ರ ಅಜ್ರಿ, ಶ್ರೀಯುತ ಸೂರ್ಯ ಪ್ರಕಾಶ್ ಎಂ, ಶ್ರೀಯುತ ನೀಲಕಂಠ ಶೆಟ್ಟಿ , ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು ಶ್ರೀಮತಿ ಚಂದ್ರಾವತಿ ಮತ್ತು ಸರ್ವ ಸದಸ್ಯರು ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪುಷ್ಪಾ . ಎನ್ ಮತ್ತು ಶಿಕ್ಷಕ ವೃಂದ ದವರು ಉಪಸ್ಥಿತರಿದ್ದರು.






