ಉಜಿರೆ:(ನ. 22) ಮಂಗಳೂರಿನ ತಲಪಾಡಿ ಶಾರದಾ ವಿದ್ಯಾಲಯ ಶಾಲೆಯಲ್ಲಿ ನ.21 ರಂದು ಅಂತರ ಶಾಲಾ ಜಿಲ್ಲಾ ಮಟ್ಟದ ಐಕ್ಸ್ (AICS) “ಕ್ರೀಡಾ ಕೂಟ 2025” ಆಯೋಜಿಸಿದ್ದು, ಇಲ್ಲಿ ನಡೆದ ವಿವಿಧ ಸ್ಪರ್ಧೆಯಲ್ಲಿ ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ, (ಸಿ.ಬಿ.ಎಸ್.ಇ) ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ,

ಇದನ್ನೂ ಓದಿ: 🟡ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ವಾರ್ಷಿಕ ಕ್ರೀಡಾ ಕೂಟ
17ರ ವಯೋಮಾನದ ಬಾಲಕರ ವಿಭಾಗದಲ್ಲಿ ಉದ್ದ ಜಿಗಿತ ಸ್ಪರ್ಧೆಯಲ್ಲಿ ವಿದ್ಯಾರ್ಥಿ ಸಿಯೋನ್ ದ್ವಿತೀಯ ಸ್ಥಾನ ಹಾಗೂ 400ಮೀ ಓಟ ತೃತೀಯ ಸ್ಥಾನ, ಗುಂಡೆಸೆತ ಸ್ಪರ್ಧೆಯಲ್ಲಿ ವಿದ್ಯಾರ್ಥಿ ಸನ್ವಿತ್ ದ್ವಿತೀಯ ಸ್ಥಾನ, 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ 400ಮೀ ಓಟ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ನಿಶಾ ತೃತೀಯ ಸ್ಥಾನ ಮತ್ತು 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ 600ಮೀ ಓಟ ವಿದ್ಯಾರ್ಥಿನಿ ತೃಷ ತೃತೀಯ ಸ್ಥಾನ, 14ರ ವಯೋಮಾನದ ಬಾಲಕರ ವಿಭಾಗದಲ್ಲಿ ಗುಂಡೆಸೆತ ಸ್ಪರ್ಧೆಯಲ್ಲಿ ವಿದ್ಯಾರ್ಥಿ ಪ್ರಥಮ್ ದ್ವಿತೀಯ ಸ್ಥಾನ ಪಡೆದು ವಿಜೇತರಾಗಿರುತ್ತಾರೆ.

ಶಾಲಾ ದೈಹಿಕ ಶಿಕ್ಷಕರಾದ ಶ್ರೀಮತಿ ರಾಜಮ್ಮ ಹಾಗೂ ಶ್ರೀ ಗಣೇಶ್ ತರಬೇತಿ ನೀಡಿರುತ್ತಾರೆ. ವಿಜೇತರಾದ ವಿದ್ಯಾರ್ಥಿಗಳನ್ನು ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳನ್ನು ಶಾಲಾ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದಿಂದ ಅಭಿನಂದಿಸಲಾಯಿತು.




