Sun. Nov 23rd, 2025

Dubai : ಕೊಡಗು & ದಕ್ಷಿಣಕನ್ನಡ ಗೌಡ ಸಮಾಜ ಆಯೋಜಿಸಿದ ಸ್ನೇಹ ಸಮ್ಮಿಲನ 2025 ಕಾರ್ಯಕ್ರಮ

ದುಬೈ : ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಆಯೋಜಿಸಿದ ಸ್ನೇಹ ಸಮ್ಮಿಲನ 2025 ಕಾರ್ಯಕ್ರಮವು ದುಬೈಯ ಆಶೀಯಾನ ಫಾರ್ಮ್ ಹೌಸ್ ಸಭಾಂಗಣದಲ್ಲಿ ವಿಜೃಂಭಣೆಯಿಂದ ಜರಗಿತು.

ಇದನ್ನೂ ಓದಿ: 🛑ಬೆಳ್ತಂಗಡಿ: ಇತ್ತೀಚೆಗೆ ರಿಕ್ಷಾ ಅಪಘಾತದಲ್ಲಿ ಮೃತರಾದ ತನ್ವಿತ್ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ,ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಸಾಧನೆ ಮಾಡಿದ ಮಕ್ಕಳಿಗೆ ಹಾಗೂ ಉದ್ಯಮಿಗಳಿಗೆ ಸನ್ಮಾನ ಮಾಡಿ ಗೌರವಿಸಿಲಾಯಿತು.ಮಧ್ಯಾಹ್ನ ದ ಭೋಜನ ನಂತರ ಗೌಡ ಸಮಾಜದ ಸದಸ್ಯರು ಗಳಿಗೆ ವಾಲಿಬಾಲ್ ಹಾಗೂ ತ್ರೋಬಾಲ್ ಪಂದ್ಯಾಟವನ್ನು ಏರ್ಪಡಿಸಲಾಯಿತು.

ಸಮ್ಮೇಳನದ ಮುಖ್ಯ ಆಯೋಜಕರಾಗಿ ಹರೀಶ್ ಕೋಡಿ, ಸುರೇಶ್ ಕುಂಪಲ, ಸುನಿಲ್ ಮೊಟ್ಟೆ ಮನೆ, ತೇಜ ಕುಮಾರ್ ಕೊರಂಬಡ್ಕ, ಮೋಹನ್ ಕಡoಬಳ, ದಿಲೀಪ್ ಉಳುವಾರ, ಶರತ್ ಚೋಕ್ಕಾಡಿ,ರೋಶನ್ ಕಂಪ, ಸುಪ್ರೀತ್ ಕುಂಡಡ್ಕ, ಜೀವನ್ ಗೌಡ ಕುಂಜತಾಡಿ,ಯತೀಶ್ ಗೌಡ, ರತೀಶ್ ಬಗ್ಗನ ಮನೆ, ಆಶೀಶ್ ಕೋಡಿ, ಮೀನಾ ಹರೀಶ್ ಕೋಡಿ, ಪುಲೋಮ ಮಹೇಂದ್ರ ಕೊಳಂಬೆ, ಹಾಗೂ ಇತರ ಸದಸ್ಯರು ಶ್ರಮಿಸಿದ್ದರು.

ಯು ಎ ಇ ಯ ವಿವಿಧ ಎಮಿರೇಟ್ಸ್ನಲ್ಲಿ ನೆಲೆಸಿರುವ ಸುಮಾರು 300 ಕ್ಕೂ ಮಿಕ್ಕಿದ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಬಾಂಧವರು ಈ ಸುಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಸಮಾರಂಭ ದ ಅಧ್ಯಕ್ಷತೆಯನ್ನು ಶ್ರೀಯುತ ಹೊದ್ದೆಟ್ಟಿ ರಾಮಚಂದ್ರ ವಹಿಸಿ ಕೊಂಡಿದ್ದು,ಮುಖ್ಯ ಅತಿಥಿಯಾಗಿ ಶ್ರೀಯುತ ಮುಕ್ಕಾಟಿ ಕಿಶೋರ್ ಭಾಗವಹಿಸಿದ್ದರು. ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆಯನ್ನು ನಿತಿನ್ ದೊರ್ತೋಡಿ ಸಾರಥ್ಯದೊಂದಿಗೆ ಯುವ ನಿರೂಪಕಿ ಶ್ರಾವ್ಯ ಗೌಡ ಹಾಗೂ ರಕ್ಷಿತಾ ಸುಪ್ರೀತ್ ಬಹಳ ಅಚ್ಚು ಕಟ್ಟಾಗಿ ನೆರವೇರಿಸಿದರು.

Leave a Reply

Your email address will not be published. Required fields are marked *