Rakshitha Shetty: ಯೂಟ್ಯೂಬರ್ ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಲ್ಲಿ ಡಿಫರೆಂಟ್ ಆಗಿ ಗುರುತಿಸಿಕೊಂಡಿದ್ದಾರೆ. ಆರಂಭದಿಂದಲೂ ರಕ್ಷಿತಾ ಶೆಟ್ಟಿಯನ್ನು ಅಶ್ವಿನಿ ಗೌಡ ಅವರು ಟಾರ್ಗೆಟ್ ಮಾಡಿದ್ದರು.

ಇದನ್ನೂ ಓದಿ: 🔵ದುಬೈ : ಕೊಡಗು & ದಕ್ಷಿಣಕನ್ನಡ ಗೌಡ ಸಮಾಜ ಆಯೋಜಿಸಿದ ಸ್ನೇಹ ಸಮ್ಮಿಲನ 2025 ಕಾರ್ಯಕ್ರಮ
ಆದರೆ ಈಗ ಅಶ್ವಿನಿ ಗೌಡ ಎದುರಿನಲ್ಲೇ ರಕ್ಷಿತಾ ಶೆಟ್ಟಿ ಅವರು ಕಿಚ್ಚನ ಚಪ್ಪಾಳೆ ಪಡೆದಿದ್ದಾರೆ. ಅದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಅಚ್ಚರಿ ಏನೆಂದರೆ, ತಮ್ಮ ವಿರುದ್ಧ ಮೊದಲಿನಿಂದಲೂ ಕುತಂತ್ರ ಮಾಡಿದ ಅಶ್ವಿನಿ ಗೌಡ ಮೇಲೂ ರಕ್ಷಿತಾ ಶೆಟ್ಟಿ ಅವರು ಮಾನವೀಯತೆ ತೋರಿಸಿದ್ದಾರೆ. ಅದೇ ಕಾರಣಕ್ಕಾಗಿ ಅವರಿಗೆ ಕಿಚ್ಚ ಸುದೀಪ್ ಅವರಿಂದ ಚಪ್ಪಾಳೆ ಸಿಕ್ಕಿದೆ.
ವಾರ ಪೂರ್ತಿ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಜಗಳಗಳು ನಡೆದಿದ್ದವು. ಅಶ್ವಿನಿ ಗೌಡ ಅವರು ಸಿಕ್ಕಾಪಟ್ಟೆ ಗರಂ ಆಗಿದ್ದರು. ತಮಗೆ ಕೆಲವರು ಏಕವಚನದಲ್ಲಿ ಮಾತನಾಡಿಸುತ್ತಾರೆ ಎಂಬ ಕಾರಣಕ್ಕೆ ಅವರು ಉಪವಾಸ ಮಾಡಿದ್ದರು. ಆ ಎಲ್ಲ ವಿಚಾರಗಳನ್ನು ಇಟ್ಟುಕೊಂಡು ಕಿಚ್ಚ ಸುದೀಪ್ ಅವರು ವೀಕೆಂಡ್ ಸಂಚಿಕೆಯಲ್ಲಿ ಮಾತನಾಡಿದರು. ಈ ನಡುವೆ ರಕ್ಷಿತಾ ಶೆಟ್ಟಿಗೆ ಮೆಚ್ಚುಗೆ ಸೂಚಿಸಿದರು.



“ನಿಮಗೂ ಅಶ್ವಿನಿ ಅವರಿಗೂ ಎಷ್ಟೇ ಕಿತ್ತಾಟ ಆಗಿದ್ದರೂ ಕೂಡ ಅವರು ಉಪವಾಸ ಮಾಡಿದಾಗ ನೀವು ತೋರಿಸಿದ ಕಾಳಜಿ ಒಳ್ಳೆಯದು. ಅಶ್ವಿನಿ ಗೌಡ ಸಲುವಾಗಿ ನೀವು ಇಷ್ಟೆಲ್ಲ ಮಾಡಿದರೂ ಕೂಡ ಅದನ್ನು ಅಶ್ವಿನಿ ಎದುರು ಹೋಗಿ ನೀವು ಹೇಳಿಕೊಳ್ಳಲಿಲ್ಲ” ಎಂದು ರಕ್ಷಿತಾ ಶೆಟ್ಟಿ ಅವರನ್ನು ಸುದೀಪ್ ಹೊಗಳಿದರು.


