ಉಜಿರೆ:(ನ. 24) ಶ್ರೀ ಭಗವದ್ಗೀತೆ ಅಭಿಯಾನ ಸಮಿತಿ ದ.ಕ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ, ಮಂಗಳೂರು ಸಂಸ್ಕೃತ ಸಂಘ ಹಾಗೂ ರಾಮಕೃಷ್ಣ ಪದವಿಪೂರ್ವ ಕಾಲೇಜು,

ಬಂಟ್ಸ್ ಹಾಸ್ಟೆಲ್ ಇದರ ಸಂಯುಕ್ತ ಆಶ್ರಯದಲ್ಲಿ ಭಗವದ್ಗೀತೆ ಅಭಿಯಾನ 2025 ಹಾಗೂ ಗೀತಾ ಜಯಂತಿ ಅಂಗವಾಗಿ ನಡೆದ ಕಂಠಪಾಠ ಸ್ಪರ್ಧೆಯಲ್ಲಿ ಭಾಗವಹಿಸಿದ ಎಸ್ ಡಿ ಎಂ ಆಂಗ್ಲ ಮಾಧ್ಯಮ ರಾಜ್ಯ ಪಠ್ಯಕ್ರಮ ಶಾಲೆ ಉಜಿರೆ ವಿದ್ಯಾರ್ಥಿನಿ ಅದ್ವಿತಿ ರಾವ್ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.





