Tue. Nov 25th, 2025

ಧರ್ಮಸ್ಥಳ: ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬ – ಖಾವಂದರ ಭಾವ ಚಿತ್ರವಿರುವ ಅಂಚೆ ಚೀಟಿ ಬಿಡುಗಡೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ, ಹೆಗ್ಗಡೆಯವರು ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ನೀಡಿದ ಅನನ್ಯ ಸೇವೆಗಾಗಿ ಭಾರತೀಯ ಜೀವ ವಿಮಾ ನಿಗಮ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಮಾ ಸೇವಾ ವಿಭಾಗದಿಂದ ಗೌರವ ಸಮರ್ಪಣೆ ಹಾಗೂ ಪೂಜ್ಯರ ಭಾವ ಚಿತ್ರ ಇರುವ ಅಂಚೆ ಚೀಟಿ ಬಿಡುಗಡೆ ಕಾರ್ಯಕ್ರಮ ನ.25 ರಂದು ಅಮೃತವರ್ಷಿಣಿ ಸಭಾಂಗಣದಲ್ಲಿ ಜರುಗಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ದೀಪ ಬೆಳಗಿಸಿ, ಆಶೀರ್ವಚನ ನೀಡಿದರು. ಮಾತೃಶ್ರೀ ಹೇಮಾವತಿ ವಿ.ಹೆಗ್ಗಡೆ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ, ಡಾ ಎಪಿಜೆ ಅಬ್ದುಲ್ ಕಲಾಂ ಇಂಟರ್ನ್ಯಾಷನಲ್ ಫೌಂಡೇಶನ್ ನ ಸಹ ಸ್ಥಾಪಕರಾದ ಎಪಿ.ಜೆ.ಎಂ.ಜೆ ಶೇಯ್ ಸಲೀಂ, ಪುನೀತ್ ಕುಮಾರ್, ಇಡಿ, ಎಸ್‌ಸಿಝಡ್, ಹೈದರಾಬಾದ್, ರಮೇಶ್‌ ಪ್ರಭು, ಅಧೀಕ್ಷಕರು ಅಂಚೆ ಕಛೇರಿ ಉಡುಪಿ, ಸಂಜಯ್ ಕೊಚಾರ್,

ಜನರಲ್ ಮ್ಯಾನೇಜರ್ -ಎಎಂಜಿ, ಮರ್ಸಿಡಿಸ್-ಬೆನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಡಿ. ಹರ್ಷೇಂದ್ರ ಕುಮಾರ್, ಧರ್ಮಸ್ಥಳ, ಚಂದ್ರಶೇಖರ ಪ್ರಸಾದ್, ಮಾರುಕಟ್ಟೆ ಸಿಇಒ, ಸುಂದರಂ ಮೋಟಾರ್ಸ್, ಗಣಪತಿ ಎನ್. ಭಟ್,ಎಲ್‌ಐಸಿ ರಮೇಶ್‌ ಪ್ರಭು, ಸೂಪರಿಂಟೆಂಡೆಂಟ್ ಪೋಸ್ಟ್ ಆಫೀಸ್ ಉಡುಪಿ ಭಾಗವಹಿಸಿದ್ದರು.

ಪೂಜ್ಯರು ಡಾ.ಡಿ ವೀರೇಂದ್ರ ಹೆಗ್ಗಡೆ ಅವರ ಜೀವನ ಮತ್ತು ಸಾಧನೆಯ ಕುರಿತು ವೀಡಿಯೊ ಪ್ರದರ್ಶನ ಹಾಗೂ ಅಂಚೆ ಇಲಾಖೆ ಹೊರತಂದ ಖಾವಂದರ ಭಾವಚಿತ್ರ ಇರುವ ಅಂಚೆ ಚೀಟಿ ಬಿಡುಗಡೆ ನಡೆಯಿತು. ಡಾ.ಎಪಿಜೆ ಅಬ್ದುಲ್ ಕಲಾಂ ಇಂಟರ್ನ್ಯಾಷನಲ್ ಫೌಂಡೇಶನ್ ವತಿಯಿಂದ ಡಾ.ಹೆಗ್ಗಡೆಯವರನ್ನು ಗೌರವಿಸಲಾಯಿತು.


ನಿನಾದ ಶಾಸ್ತ್ರೀಯ, ಧರ್ಮಸ್ಥಳ ಮಕ್ಕಳ ಪ್ರಾರ್ಥನೆ ಬಳಿಕ ಗಣಪತಿ ಎನ್. ಭಟ್, ಎಸ್ ಡಿ ಎಂ ಎಲ್ . ಐ. ಸಿ-ಉಡುಪಿ ಡಿ.ಒ ಸ್ವಾಗತಿಸಿದರು. ದಿನೇಶ್ ಪ್ರಭು, ಮೈಕ್ರೋ ಇನ್ಸೂರೆನ್ಸ್ ಮ್ಯಾನೇಜ‌ರ್, ಎಲ್‌ಐಸಿ ಉಡುಪಿ ಧನ್ಯವಾದವಿತ್ತರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು