Tue. Nov 25th, 2025

Belthangady: ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೊರಿಂಜದಲ್ಲಿ ದೇವರಿಗೆ ವಿಶೇಷ ಪ್ರಾರ್ಥನೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್, ತಾಲೂಕು ಭಜನಾ ಪರಿಷತ್ ಗುರುವಾಯನಕೆರೆ,

ಇದನ್ನೂ ಓದಿ; 🟣ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಸಂಭ್ರಮ

ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೊರಿಂಜ ಮತ್ತು ಪ್ರಗತಿ ಬಂಧು ಒಕ್ಕೂಟ ಉರುವಾಲು ಇವುಗಳ ಸಹಕಾರದೊಂದಿಗೆ ಪೂಜ್ಯ ಖಾವಂದರಿಗೆ ಸದಾ ಮನಃಶಾಂತಿ, ಆರೋಗ್ಯ, ನೆಮ್ಮದಿ ಹಾಗೂ ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನು ಮತ್ತು ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಶಕ್ತಿಯನ್ನು ನೀಡುವಂತೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೊರಿಂಜದಲ್ಲಿ ದೇವರಿಗೆ ವಿಶೇಷ ಪ್ರಾರ್ಥನೆಯನ್ನು ಮತ್ತು ಭಜನೆಯನ್ನು ಮಾಡಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ಕಾರ್ತಿಕ್ ಪೂಜೆಯನ್ನು ಮಾಡಿದರು.


ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮೋಕ್ತೇಸರರಾದ ಯೋಗೀಶ್ ಪೂಜಾರಿ ಕಡ್ತಿಲ,ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷರಾದ ಈಶ್ವರ ಗೌಡ,ಕಾರ್ಯದರ್ಶಿ ಆಶಾ, ಕುಣಿತ ಭಜನೆಯ ತರಬೇತಿದಾರರಾದ ಶ್ರೀ ನಾಗೇಶ್ ನೆರಿಯ, ಧ.ಗ್ರಾ.ಯೋ.ಸೇವಾ ಪ್ರತಿನಿಧಿ ಸೀತಾರಾಮ ಆಳ್ವ ಕೊರಿಂಜ, ಭಜನಾ ಮಂಡಳಿಯ ಕಾರ್ಯದರ್ಶಿ ಕೃಷ್ಣಪ್ಪ ನಾಯ್ಕ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಹಾಲಿ ಸದಸ್ಯೆ ಶ್ರೀ ಮತಿ ಜಲಜಾಕ್ಷಿ,ಭಜನಾ ಮಂಡಳಿ ಸದಸ್ಯ ರಾದ ಗಗನ್ ಕುಮಾರ್ , ಸುಪ್ರೀತ್ ನಾಯ್ಕ,ಚರಣ್, ಸತ್ಯನಾರಾಯಣ ಭಜನಾ ಮಂಡಳಿ ಸದಸ್ಯ ಗಣೇಶ ಗೌಡ ಬನಾರಿ, ವಿಘ್ನೇಶ್ವರ ಭಜನಾ ಮಂಡಳಿ ಸದಸ್ಯ ಪ್ರದೀಪ್ ನಾಯ್ಕ ಆನಡ್ಕ, ಸ್ವಸಹಾಯ ಸಂಘದ ಸದಸ್ಯರು, ದೇವಸ್ಥಾನ ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳು ಮತ್ತು ಭಜಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು