ಬೆಳ್ತಂಗಡಿ: ರೂ.5.00 ಲಕ್ಷ ವೆಚ್ಚದಲ್ಲಿ ಮಿತ್ತಬಾಗಿಲು ಗ್ರಾಮದ ಕಿಲ್ಲೂರು ಎಂಬಲ್ಲಿ ನಿರ್ಮಾಣಗೊಳ್ಳಲಿರುವ ರಿಕ್ಷಾ ತಂಗುದಾಣ ಕಾಮಗಾರಿಗೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರವರು ಶಿಲಾನ್ಯಾಸ ನೆರವೇರಿಸಿದರು.

ಇದನ್ನೂ ಓದಿ: 🟡ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆ ಉಜಿರೆಯಲ್ಲಿ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ
ಈ ಸಂದರ್ಭದಲ್ಲಿ ಲಾಯಿಲ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅರವಿಂದ ಲಾಯಿಲ, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಮಂಡಲ ಕಾರ್ಯದರ್ಶಿ ಪ್ರಭಾಕರ್ ಆಚಾರ್ಯ, ಮಿತ್ತಬಾಗಿಲು ಪಂಚಾಯತ್ ಅಧ್ಯಕ್ಷ ವಿನಯಚಂದ್ರ,
ಶಕ್ತಿಕೇಂದ್ರ ಪ್ರಮುಖ್ ಸಚಿನ್ ಗೌಡ ,ಮಲವಂತಿಗೆ ಶಕ್ತಿ ಕೇಂದ್ರ ಪ್ರಮುಖ್ ಮಧುಸೂಧನ್, ಪಂಚಾಯತ್ ಸದಸ್ಯರು,ಜನಪ್ರತಿನಿದಿಗಳು, ಪಕ್ಷದ ಪ್ರಮುಖರು, ಕಾರ್ಯಕರ್ತರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.





