Wed. Nov 26th, 2025

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಎಲ್. ಐ.ಸಿ ಯಿಂದ ಕೊಡುಗೆ ಹಸ್ತಾಂತರ

ಕೊಕ್ಕಡ: ನಾಡಿನ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭಕ್ತಾದಿಗಳ ಉಪಯೋಗಕ್ಕಾಗಿ ಬ್ಯಾರಿಕೇಡ್ ಹಾಗೂ ಬೃಹತ್ ಗೋಡೆ ಗಡಿಯಾರಗಳನ್ನು ಎಲ್ ಐ ಸಿ ಉಡುಪಿ ವಿಭಾಗದಿಂದ ಕೊಡುಗೆಯಾಗಿ ನೀಡಲಾಯಿತು.

ಇದನ್ನೂ ಓದಿ: 🟡ಉಜಿರೆ: ಉಜಿರೆಯ ಶ್ರೀ ಧ.ಮಂ.ಪ.ಪೂ.ಕಾಲೇಜಿನಲ್ಲಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಸಂಭ್ರಮಾಚರಣೆ ಪ್ರಯುಕ್ತ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ


ಎಲ್ ಐ ಸಿ ಹೈದರಾಬಾದ್ ಜೋನಲ್ ಮ್ಯಾನೇಜರ್ ಪುನೀತ್ ಕುಮಾರ್ ಕೊಡುಗೆಯನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಶಬರಾಯರಿಗೆ ಹಸ್ತಾಂತರಿಸಿದರು.


ದೇವಸ್ಥಾನದ ವತಿಯಿಂದ ಪುನೀತ್ ಕುಮಾರ್ ಹಾಗೂ ಡಿವಿಷನಲ್ ಮ್ಯಾನೇಜರ್ ಗಣಪತಿ ಎನ್ ಭಟ್ಟರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಲ್ ಐ ಸಿ ಉಡುಪಿ ಡಿವಿಷನಲ್ ಮ್ಯಾನೇಜರ್ ಜಿ ಯನ್ ಭಟ್,

ಮಾರ್ಕೆಟಿಂಗ್ ಮ್ಯಾನೇಜರ್ ಬಿಜು ಜೋಸೆಫ್, ಸೇಲ್ಸ್ ಮ್ಯಾನೇಜರ್ ದುರ್ಗಾರಾಮ್ ಶೆಣೈ, ಬೆಳ್ತಂಗಡಿ ಬ್ರಾಂಚ್ ಮೆನೇಜರ್ ಪ್ರಕಾಶ್ ಕುಮಾರ್, ಉಡುಪಿ ವಿಭಾಗದ ಟಿ ಶಾಮಸುಂದರ, ಬೆಳ್ತಂಗಡಿ ಅಭಿವೃದ್ಧಿ ಅಧಿಕಾರಿ ಉದಯಶಂಕರ್ ದೇವಳದ ಅರ್ಚಕರು ಸುಬ್ಬಣ್ಣ ಉಪಸ್ಥಿತರಿದ್ದರು. ವ್ಯ. ಸ. ಅಧ್ಯಕ್ಷರು ಶ್ರೀ ಸುಬ್ರಹ್ಮಣ್ಯ ಶಬರಾಯ ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *