ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜು ಉಜಿರೆ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ಸಂವಿಧಾನ ದಿನವನ್ನು ಆಚರಿಸಲಾಯಿತು.

ಇದನ್ನೂ ಓದಿ: 🛑ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಸಂವಿಧಾನ ದಿನಾಚರಣೆ
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರಮೋದ್ ಕುಮಾರ್ ಮಾತನಾಡಿ
” ಪ್ರಪಂಚದಲ್ಲಿಯೇ ಅತೀ ದೊಡ್ಡ ಹಾಗೂ ಸಮಗ್ರವಾದ ಸಂವಿಧಾನ ಹೊಂದಿರುವುದು ನಮ್ಮ ದೇಶದ ಹೆಮ್ಮೆ.ಸಂವಿಧಾನದಲ್ಲಿರುವ ಹಕ್ಕು ಕರ್ತವ್ಯಗಳು ಪ್ರತಿಯೊಬ್ಬ ನಾಗರಿಕರು ನಿರ್ಭಿತಿಯಿಂದ ಜೀವಿಸಲು ಸಾಧ್ಯವಾಗಿಸಿದೆ” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಉಜಿರೆ ಇಲ್ಲಿನ ಸಹಾಯಕ ಪ್ರಧ್ಯಾಪಕರು ಹಾಗೂ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ನಟರಾಜ್ ಹೆಚ್ ಕೆ ಇವರು ಮಾತನಾಡಿ "ನಮ್ಮ ದೇಶದ ಸಂವಿಧಾನ ನಮ್ಮೆಲ್ಲರಿಗೂ ನೆಮ್ಮದಿಯಿಂದ ಬದುಕುವ ಅವಕಾಶ ಮಾಡಿಕೊಟ್ಟಿದೆ. ವಿವಿಧ ಜಾತಿ ಧರ್ಮ ಪ್ರಾದೇಶಿಕ ಭಿನ್ನತೆ ಎಲ್ಲವನ್ನು ಗಮನಿಸಿ ಸಮಾನತೆಯಿಂದ ಬದುಕುವ ಹಕ್ಕನ್ನು ನಮಗೆ ನೀಡಿದೆ. ಇದು ನಮ್ಮ ಸಂವಿಧಾನದ ವಿಶೇಷತೆ" ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರು ಸ್ವಯಂ ಸೇವಕರಿಗೆ ಸಂವಿಧಾನ ದಿನದ ಪ್ರತಿಜ್ಞಾ ವಿಧಿ ಭೋದಿಸಿದರು.
ವೇದಿಕೆಯಲ್ಲಿ ಎನ್ ಎಸ್ ಎಸ್ ಯೋಜನಾಧಿಕಾರಿ ವಿಶ್ವನಾಥ್ ಎಸ್, ಸಹ ಯೋಜನಾಧಿಕಾರಿ ಶೋಭಾ ಪಿ ಉಪಸ್ಥಿತರಿದ್ದರು.
ಸ್ವಯಂ ಸೇವಕ ಕಾರ್ತಿಕ್ ಸ್ವಾಗತಿಸಿ ವಂದಿಸಿದರು. ಸ್ವಯಂ ಸೇವಕಿ ಧನ್ಯ ನಿರೂಪಿಸಿದರು.





