ಬಂಟ್ವಾಳ: ಪರಮಪೂಜ್ಯ ಖಾವಂದರು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ಪೇರಮೊಗರು ಶ್ರೀ ವನದುರ್ಗಾ ದೇವಸ್ಥಾನ ದೇಂತಡ್ಕದಲ್ಲಿ ಪೆರ್ನೆ ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತ ವೃಂದದಿಂದ ದೇವರಿಗೆ ರಂಗಪೂಜೆ ಸೇವೆಯನ್ನು ಸಲ್ಲಿಸಲಾಯಿತು.

ಪ್ರಧಾನ ಅರ್ಚಕರಾದ ನಾರಾಯಣ ಭಟ್ ವಡ್ಯ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟು ಶುಭ ಹಾರೈಸಿದರು. ಪೆರಾಜೆ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಹಾಗೂ ಕರ್ವೇಲು ಶ್ರೀ ರಾಮ ಭಜನಾ ಮಂಡಳಿಯ ಸದಸ್ಯರು ಭಜನಾ ಸೇವೆಯನ್ನು ಸಲ್ಲಿಸಿದರು.

ಸುಮಾರು 120 ಕ್ಕೂ ಹೆಚ್ಚು ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಅರ್ಚಕ ವೃಂದ, ಅಧ್ಯಕ್ಷರು ಮತ್ತು ಸದಸ್ಯರು ಶ್ರೀ ವನದುರ್ಗಾ ದೇವಸ್ಥಾನ ಆಡಳಿತ ಟ್ರಸ್ಟ್, ಯೋಜನೆಯ ಜನಜಾಗೃತಿ ವೇದಿಕೆ ಸದಸ್ಯರು,
ಸ್ಥಳೀಯ ಗಣ್ಯರು, ನಿಕಟಪೂರ್ವ ಒಕ್ಕೂಟದ ಅಧ್ಯಕ್ಷರು, ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು, ವಿ ಎಲ್ ಇ, ಶೌರ್ಯ ಘಟಕದ ಸದಸ್ಯರು, ಎಲ್ಲಾ ಒಕ್ಕೂಟಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಪೆರ್ನೆ ವಲಯದ ನೂರಾರು ಭಕ್ತಾಭಿಮಾನಿಗಳು ಪಾಲ್ಗೊಂಡಿದ್ದರು.




