ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಪೂಜ್ಯ ಖಾವಂದರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಮುಖ್ಯ ಅಭ್ಯಾಗತರಾಗಿ ಶ್ರೀ ಜೀವನ್ ಕುಮಾರ್ ಶೆಟ್ಟಿ ಜನರಲ್ ಮ್ಯಾನೇಜರ್ ಸಿರಿ ಗ್ರಾಮೋದ್ಯೋಗ ಇವರು ಆಗಮಿಸಿ, ಪೂಜ್ಯ ಹೆಗ್ಗಡೆಯವರ ಗುರಿ ಅಭಿವೃದ್ಧಿ , ಏಳಿಗೆ ಬಗ್ಗೆ ತಿಳಿಯಪಡಿಸಿದರು.

ಈ ಸಂದರ್ಭದಲ್ಲಿ ಭಾಷಣ, ಡ್ರಾಯಿಂಗ್, ಗ್ರೀಟಿಂಗ್ ಕಾರ್ಡ್ ತಯಾರಿ ಸ್ಪರ್ಧೆ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಯಿತು, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು.
ವೇದಿಕೆಯಲ್ಲಿ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ ಆರ್ ಉಪಸ್ಥಿತರಿದ್ದರು.
ಶಿಕ್ಷಕರುಗಳಾದ ಸೌಮ್ಯ ಪಿ, ಸಹನಾ ಅಮಿತಾ, ಪ್ರವೀಣ್ ಎನ್ ,ನೀತಾ ಶ್ರೇಯಾಂಸ ಜೈನ್ ಆಯೋಜಿಸಿದ ಕಾರ್ಯಕ್ರಮ ದಲ್ಲಿ ಎಲ್ಲಾ ಶಿಕ್ಷಕರ ಸಹಕಾರದೊಂದಿಗೆ, ಸ್ವಾಗತವನ್ನು ಶ್ರೀಮತಿ ನೀತಾ , ಧನ್ಯವಾದವನ್ನು ಅಮಿತಾ , ನಿರೂಪಣೆಯಲ್ಲಿ ಶಿಕ್ಷಕ ಶ್ರೇಯಾಂಸ ಜೈನ್ ನೆರವೇರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಶಾಲಾ ವಿದ್ಯಾರ್ಥಿಗಳು ಕೇಂದ್ರ ಬಿಂದುವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.





