ಕೊಕ್ಕಡ: ನಾಡಿನ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭಕ್ತಾದಿಗಳ ಉಪಯೋಗಕ್ಕಾಗಿ ಬ್ಯಾರಿಕೇಡ್ ಹಾಗೂ ಬೃಹತ್ ಗೋಡೆ ಗಡಿಯಾರಗಳನ್ನು ಎಲ್ ಐ ಸಿ ಉಡುಪಿ ವಿಭಾಗದಿಂದ ಕೊಡುಗೆಯಾಗಿ ನೀಡಲಾಯಿತು.

ಎಲ್ ಐ ಸಿ ಹೈದರಾಬಾದ್ ಜೋನಲ್ ಮ್ಯಾನೇಜರ್ ಪುನೀತ್ ಕುಮಾರ್ ಕೊಡುಗೆಯನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಶಬರಾಯರಿಗೆ ಹಸ್ತಾಂತರಿಸಿದರು.


ದೇವಸ್ಥಾನದ ವತಿಯಿಂದ ಪುನೀತ್ ಕುಮಾರ್ ಹಾಗೂ ಡಿವಿಷನಲ್ ಮ್ಯಾನೇಜರ್ ಗಣಪತಿ ಎನ್ ಭಟ್ಟರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಲ್ ಐ ಸಿ ಉಡುಪಿ ಡಿವಿಷನಲ್ ಮ್ಯಾನೇಜರ್ ಜಿ ಯನ್ ಭಟ್,

ಮಾರ್ಕೆಟಿಂಗ್ ಮ್ಯಾನೇಜರ್ ಬಿಜು ಜೋಸೆಫ್, ಸೇಲ್ಸ್ ಮ್ಯಾನೇಜರ್ ದುರ್ಗಾರಾಮ್ ಶೆಣೈ, ಬೆಳ್ತಂಗಡಿ ಬ್ರಾಂಚ್ ಮೆನೇಜರ್ ಪ್ರಕಾಶ್ ಕುಮಾರ್, ಉಡುಪಿ ವಿಭಾಗದ ಟಿ ಶಾಮಸುಂದರ, ಬೆಳ್ತಂಗಡಿ ಅಭಿವೃದ್ಧಿ ಅಧಿಕಾರಿ ಉದಯಶಂಕರ್ ದೇವಳದ ಅರ್ಚಕರು ಸುಬ್ಬಣ್ಣ ಉಪಸ್ಥಿತರಿದ್ದರು. ವ್ಯ. ಸ. ಅಧ್ಯಕ್ಷರು ಶ್ರೀ ಸುಬ್ರಹ್ಮಣ್ಯ ಶಬರಾಯ ಕೃತಜ್ಞತೆ ಸಲ್ಲಿಸಿದರು.


