ಬೆಳ್ತಂಗಡಿ: ಶ್ರೀ ಸೊಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನ ಶಿರಸಿ ,ಇವರು ಶಿವಮೊಗ್ಗ ಜಿಲ್ಲೆಯಲ್ಲಿ ನಡೆಸಿದ ಶ್ರೀ ಭಗವದ್ಗೀತಾ ಅಭಿಯಾನ- 2025 ರ ಹಿರಿಯ ಪ್ರಾಥಮಿಕ ವಿಭಾಗದ ರಾಜ್ಯ ಮಟ್ಟದ ಕಾರ್ಯಕ್ರಮವು ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ನ.30ರಂದು ನಡೆಯಿತು.

ಭಗವದ್ಗೀತಾ ಕಂಠಪಾಠ (ಹಿರಿಯ ಪ್ರಾಥಮಿಕ ಶಾಲಾ ವಿಭಾಗ) ದಲ್ಲಿ ಉಜಿರೆ ಎಸ್.ಡಿ.ಎಂ ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲಾ ವಿದ್ಯಾರ್ಥಿನಿ ಕು.ಅದ್ವಿತಿ ರಾವ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಶಿವಮೊಗ್ಗ ಕೇಂದ್ರವಾಗಿ ಈ ವರ್ಷ ನಡೆದ ಅಭಿಯಾನದ ಸಮಾರೋಪಕ್ಕೆ ರಾಜ್ಯ, ರಾಷ್ಟ್ರಮಟ್ಟದ ನಾಯಕರು, ಜನಪ್ರತಿನಿಧಿಗಳು, ವಿವಿಧ ಮಠಾಧೀಶರು ಸಾಕ್ಷಿಯಾದರು.





