Mon. Dec 1st, 2025

Belthangadi:(ಡಿ.04 – ಡಿ. 05) ಶ್ರೀ ಸದಾಶಿವೇಶ್ವರ ದೇವಸ್ಥಾನ ಸಂಗಮ ಕ್ಷೇತ್ರ ಪಜಿರಡ್ಕದ ನೂತನ ಶಿಲಾಮಯ ಧ್ವಜಸ್ತಂಭ ಸ್ಥಾಪನೆ & ಶೋಭಾ ಯಾತ್ರೆ

ಬೆಳ್ತಂಗಡಿ:(ಡಿ.1) ಕಲ್ಮಂಜ ಗ್ರಾಮದ ಶ್ರೀ ಸದಾಶಿವೇಶ್ವರ ದೇವಸ್ಥಾನ ಸಂಗಮ ಕ್ಷೇತ್ರ ಕಲ್ಮಂಜ ಗ್ರಾಮದ ಮುಂಚಾನ ಶ್ರೀ ಮಹಾದೇವಿಕೃಪಾ ಮನೆಯ ಶ್ರೀಮತಿ ಸುಕನ್ಯಾ ಮತ್ತು ಜಯರಾಮ ರಾವ್ ಮತ್ತು ಮಕ್ಕಳು ಸಮರ್ಪಿಸಲಿರುವ ನೂತನ ಶಿಲಾಮಯ ಧ್ವಜಸ್ಥಂಭವು ಕಾರ್ಕಳದಿಂದ ಹೊರಟು

ಇದನ್ನೂ ಓದಿ: 🔵ಬೆಳ್ತಂಗಡಿ: ವಿಶ್ವಹಿಂದೂ ಪರಿಷತ್ ನ ಕೇಂದ್ರೀಯ ಸಮಿತಿ ಜಂಟಿ ಮಹಾಪ್ರಧಾನ ಕಾರ್ಯದರ್ಶಿ ಗೋಪಾಲ್ ಜೀ ಯವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

ಬೆಳ್ತಂಗಡಿ ಮಾರ್ಗವಾಗಿ ದಿನಾಂಕ 04/12/2025ಗುರುವಾರ ಉಜಿರೆಗೆ ತಲುಪಲಿದೆ. ಉಜಿರೆಯಲ್ಲಿ 3.00 ಗಂಟೆಗೆ ವಿವಿಧ ಗಣ್ಯರು ಸ್ವಾಗತಿಸಿ ಚಾಲನೆ ನೀಡಿ ಭವ್ಯ ಶೋಭಾ ಯಾತ್ರೆಯೊಂದಿಗೆ ಧರ್ಮಸ್ಥಳ ಮುಂಡ್ರುಪ್ಪಾಡಿ ಮಾರ್ಗವಾಗಿ ಶ್ರೀ ಕ್ಷೇತ್ರಕ್ಕೆ ತಲುಪಲಿದೆ.

ದಿನಾಂಕ 05/12/2025 ರಂದು ಶ್ರೀ ಕ್ಷೇತ್ರ ಪಜಿರಡ್ಕದಲ್ಲಿ 1008 ಮಹಾಮಂಡಲೇಶ್ವರ ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜರವರ ದಿವ್ಯ ಸಾನಿಧ್ಯ ದೊಂದಿಗೆ ಧ್ವಜಸ್ತಂಭದ ಸ್ಥಾಪನೆ ಕಾರ್ಯಕ್ರಮ ನಡೆಯಲಿದೆ.

Leave a Reply

Your email address will not be published. Required fields are marked *