ಬೆಂಗಳೂರು:(ಡಿ.1) ಡಿಸೆಂಬರ್ 7 ರಂದು ನಡೆಯುವ ಯುವ ವೈಭವ 2025 ಪತ್ರಿಕಾಗೋಷ್ಠಿಯು ಪ್ರೆಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆಯಿತು.

ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಶಶಿಧರ್ ಕೋಟ್ಯಾನ್ ಮತ್ತು ಕಾರ್ಯದರ್ಶಿ ಸಂತೋಷ್ ಪೂಜಾರಿ ಪಣಪಿಲ ಅವರು ಯುವ ವೈಭವ 2025 ಹಾಗೂ ಯುವವಾಹಿನಿ ಸಂಘಟನೆ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಾಪಕ ಅಧ್ಯಕ್ಷರಾದ ಸುಧೀರ್. ಎಸ್ ಪೂಜಾರಿ, ಗೌರವ ಸಲಹೆಗಾರರಾದ ಕೆ.ಬಿ. ಜಯರಾಮ್, ಆರೋಗ್ಯ ನಿರ್ದೇಶಕರಾದ ಅನಿತಾ ಕಮಲಾಕ್ಷ ಅವರು ಉಪಸ್ಥಿತರಿದ್ದರು.
ಪ್ರಸಿದ್ಧ ಪತ್ರಿಕಾ ಬರಹಗಾರರು ಹಾಗೂ ಮಾಧ್ಯಮ ಸ್ನೇಹಿತರು ಈ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.



ಯುವ ವೈಭವ 2025 ಕಾರ್ಯಕ್ರಮ ರಾಜ್ಯದ ಮೂಲೆ ಮೂಲೆಗೂ ತಲುಪಿಸಲು ಪತ್ರಿಕಾಗೋಷ್ಠಿ ಪ್ರಧಾನ ವೇದಿಕೆಯಾಯಿತು.


