Tue. Dec 2nd, 2025

Belthangady: ಕಂಪ್ಯೂಟರ್‌ ತರಬೇತಿಯ ಸಮಾರೋಪ ಕಾರ್ಯಕ್ರಮ

ಬೆಳ್ತಂಗಡಿ: ಇಂದಿನ ಡಿಜಿಟಲ್‌ಯುಗದಲ್ಲಿ ಕಂಪ್ಯೂಟರ್‌ ಶಿಕ್ಷಣ ಮುಖ್ಯವಾಗಿದೆ. ಕಂಪ್ಯೂಟರ್ ಶಿಕ್ಷಣ ಎಂದರೆ ಒಂದು ಕೌಶಲ್ಯ‌. ಪ್ರಸ್ತುತ ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಗೆ ಕೌಶಲ್ಯವೂ ಮುಖ್ಯ.

ಇದನ್ನೂ ಓದಿ: 🔵ಬೆಳ್ತಂಗಡಿ: ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ಮುಂಡಾಜೆ ತಂಡದ ಭಜಕ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಸ್ವಚ್ಛತೆ ಕಾರ್ಯಕ್ರಮ

ಅವಾಗ ಉತ್ತಮ ಉದ್ಯೋಗದ ಕನಸನ್ನು ನನಸು ಮಾಡಿಕೊಳ್ಳಬಹುದು. ಇಲ್ಲಿಯ ಗ್ರಾಮೀಣ ಶ್ರೇಷ್ಠತಾ ಕೇಂದ್ರ ತರಬೇತಿ ಸಂಸ್ಥೆಯಲ್ಲಿ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ತರಬೇತಿಯನ್ನು ಆಯೋಜಿಸಲಾಗುತ್ತಿದೆ. ಎಂದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ – ಲಾಯಿಲ ತರಬೇತಿ ಕೇಂದ್ರದ ಪ್ರಾಂಶುಪಾಲ ರಮೇಶ್‌ ಇವರು ಕಂಪ್ಯೂಟರ್‌ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕಛೇರಿ ಪ್ರಬಂಧಕ ಅಣ್ಣು ಗೌಡ ಉಪಸ್ಥಿತರಿದ್ದರು.


ಕಂಪ್ಯೂಟರ್ ತರಬೇತಿಯು ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿ ಯೋಜನೆಯಡಿ ನೋಂದಾಯಿತವಾಗಿದ್ದು, ಕೌಶಲ್ಯ ಯೋಜನೆಯಡಿ ಪ್ರಮಾಣೀಕೃತ ಪ್ರಮಾಣ ಪತ್ರ ಮತ್ತು ಅಂಕಪಟ್ಟಿ ವಿತರಿಸಲಾಯಿತು. ಒಟ್ಟು 25 ವಿದ್ಯಾರ್ಥಿಗಳು ಪ್ರಮಾಣಪತ್ರ ಪಡೆದುಕೊಂಡಿರುತ್ತಾರೆ. ಕಾರ್ಯಕ್ರಮವನ್ನು ಕಂಪ್ಯೂಟರ್‌ ತರಬೇತುದಾರರು ಜಯಶ್ರೀ ಇವರು ನಿರ್ವಹಣೆ ಮಾಡಿ, ಧನ್ಯವಾದ ನೀಡಿದರು.

Leave a Reply

Your email address will not be published. Required fields are marked *