ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯ ಸಂಚಾಲಕರಾದ ಶ್ರೀ ಸುಬ್ರಮಣ್ಯ ಪ್ರಸಾದ್ ರವರ ಮಾರ್ಗದರ್ಶನದಂತೆ

ಕುಣಿತ ಭಜನಾ ಗುರುಗಳಾದ ನಾಗೇಶ್ ಬಿ ನೆರಿಯ ಇವರ ಮುಂದಾಳತ್ವದಲ್ಲಿ ಸಂಕ್ರಾಂತಿಯ ದಿವಸದಂದು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಪರಪ್ಪು ಶಿಬರಾಜೆ ಇದರ ಸದಸ್ಯರಿಂದ ಹಾಗೂ ಊರವರಿಂದ ಭಜನಾ ಸೇವೆಯ ನಂತರ
ಪೂಜ್ಯ ಖಾವಂದರಿಗೆ ಸುಖ, ಶಾಂತಿ, ನೆಮ್ಮದಿ, ಆರೋಗ್ಯ, ಆಯಸ್ಸು ಹಾಗೂ ಇನ್ನಷ್ಟು ಜನ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಶಕ್ತಿಯನ್ನು ನೀಡುವಂತೆ ಶ್ರೀ ದುರ್ಗಾಪರಮೇಶ್ವರಿ ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡಿದರು.





