Wed. Dec 3rd, 2025

ಗುರುವಾಯನಕೆರೆ: ಜನಮಂಗಲ ಕಾರ್ಯಕ್ರಮದಡಿ ಯು ಶೇಪ್ ವಾಕರ್ ವಿತರಣೆ

ಗುರುವಾಯನಕೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗುರುವಾಯನಕೆರೆ ಕುದ್ರಡ್ಕ ಕಾರ್ಯಕ್ಷೇತ್ರದ ಪದ್ಮನಾಭ ಗೌಡ ರವರು ಪಾರ್ಶ್ವವಾಯು ಅನಾರೋಗ್ಯದಿಂದ ನಡೆದಾಡಲು ಕಷ್ಟವಾಗುತ್ತಿತ್ತು. ಅವರಿಗೆ ನಡೆದಾಡಲು ಅನುಕೂಲವಾಗುವಂತೆ ಯು ಸೇಫ್ ವಾಕರ್ ರನ್ನು ವಿತರಣೆ ಮಾಡಲಾಯಿತು.

ಇದನ್ನೂ ಓದಿ: 🟣ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮದ ವಾರ್ಷಿಕೋತ್ಸವ

ಮಾನ್ಯ ಯೋಜನಾಧಿಕಾರಿ ಅಶೋಕರವರು ಮಾತನಾಡಿ, ಯೋಜನೆಯ ಜನ ಮಂಗಲ ಕಾರ್ಯಕ್ರಮದಡಿ ಅನಾರೋಗ್ಯ ದಿಂದ ಬಳಲುತ್ತಿರುವವರಿಗೆ ಅಶಕ್ತರಿಗೆ ಅನುಕೂಲವಾಗುವಂತೆ ಯೋಜನೆಯಿಂದ, ಅನಾರೋಗ್ಯ ದಿಂದ ಮಲಗಿರುವವರಿಗೆ, ವಾಟರ್ ಬೆಡ್, ಅನಾರೋಗ್ಯ ದಿಂದ ನಡೆದಾಡಲು ಅಸಾಧ್ಯ ಆದವರಿಗೆ ಕುಳಿತಲ್ಲಿಯೇ ಓಡಾಡಲು ಔಟ್ ಸೈಡ್ ವೀಲ್ ಚೇರ್,

ನಡೆದಾಡಲು ಅಸಾಧ್ಯವಾಗಿರುವ ಶೌಚಾಲಯಕ್ಕೆ ಹೋಗಲು ಮಾತ್ರ ಕಮಾನ ವೀಲ್ ಚೇರ್, ಕಾಲುಗಳಲ್ಲಿ ಸ್ವಲ್ಪ ಬಲವಿದ್ದು ಎರಡು ಕೈ ಗಳಿಂದ ನಡೆದಾಡಲು ಸಾಧ್ಯವಿರುವವರಿಗೆ,ಯು ಶೇಪ್ ವಾಕರ್ ಹಾಗೂ ಸ್ವಲ್ಪಮಟ್ಟಿಗೆ ನಡೆದಾಡಲು ಅಶಕ್ತರಿಗೆ ವಯೋವೃದ್ದರಿಗೆ, ಊರುಗೋಲು ಹಾಗೂ ಕಾಲುಗಳಿಗೆ ಸ್ವಾಧೀನ ಇಲ್ಲದವರಿಗೆ ನಡೆದಾಡಲು ಉಪಕರಣ ಗಳನ್ನು ಯೋಜನೆಯ ಜನಮಂಗಲ ಕಾರ್ಯಕ್ರಮ ದಲ್ಲಿ ತಾಲೂಕಿನಲ್ಲಿ ಅನಾರೋಗ್ಯ ಹಾಗೂ ಅಶಕ್ತರಿಗೆ ವಿತರಿಸಲಾಗುವುದು ಎಂದು ಮಾಹಿತಿ ತಿಳಿಸಿದರು.

ಕುದ್ರಡ್ಕ ಒಕ್ಕೂಟದ ಅಧ್ಯಕ್ಷರು ವಿಜಯ ಮಡಕ್ಕಿಲ, ವಲಯದ ಮೇಲ್ವಿಚಾರಕರು ಕೇಶವ, ಕೃಷಿ ಮೇಲ್ವಿಚಾರಕರು ಕೃಷ್ಣ ಗೌಡ, ಕುದ್ರಡ್ಕ, ಮಚ್ಚಿನ ಸೇವಾಪ್ರತಿನಿಧಿ ಶ್ರೀಮತಿ ನಂದಿನಿ ಹಾಗೂ ಪರಮೇಶ್ವರ್, ಒಕ್ಕೂಟದ ಜೊತೆ ಕಾರ್ಯದರ್ಶಿ ಜಯಂತಿ ಹಾಗೂ ಇತರರು ಉಪಸಿತರಿದ್ದರು.

Leave a Reply

Your email address will not be published. Required fields are marked *