ಧರ್ಮಸ್ಥಳ : ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಧರ್ಮಸ್ಥಳದಲ್ಲಿ ನೂತನವಾಗಿ ನಿರ್ಮಾಣಗೊಂಡ ಶಾಲಾ ಪ್ರವೇಶ ದ್ವಾರದ ಉದ್ಘಾಟನೆಯನ್ನು ಪರಮ ಪೂಜ್ಯ ಖಾವಂದರ ಮತ್ತು ಶ್ರೀ ಡಿ.ಹರ್ಷೇಂದ್ರ ಕುಮಾರ್ ಇವರ ನಿರ್ದೇಶನದಂತೆ ಡಿ ಎಂ ಸಿ ವಿಭಾಗದ ಮುಖ್ಯ ಇಂಜಿನಿಯರ್ ಗಳಾದ ಶ್ರೀ ಯಶೋಧರ ಇವರು ನೆರವೇರಿಸಿ ಶುಭ ಹಾರೈಸಿದರು.

ಇದನ್ನೂ ಓದಿ: 🟣ಗುರುವಾಯನಕೆರೆ: ಜನಮಂಗಲ ಕಾರ್ಯಕ್ರಮದಡಿ ಯು ಶೇಪ್ ವಾಕರ್ ವಿತರಣೆ
ಕಾರ್ಯಕ್ರಮದಲ್ಲಿ ಡಿ.ಎಂ.ಸಿ ಯ ಶ್ರೀ ನಿಖಿಲ್ , ಮುಖ್ಯ ಶಿಕ್ಷಕರಾದ ಕಮಲ್ ತೇಜು ರಜಪೂತ್ , ಶಿಕ್ಷಕ ವೃಂದದವರು ಹಾಗೂ ಮಕ್ಕಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಶಿಕ್ಷಕರಾದ ಶ್ರೀ ಜೋಸೆಫ್ ನಿರ್ವಹಿಸಿದರು.





