ಗುರುವಾಯನಕೆರೆ: ಸಹಕಾರ ಭಾರತೀ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ರಾಜ್ಯದಲ್ಲಿ ಪ್ರಪ್ರಥಮವಾಗಿ ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಪದಾಧಿಕಾರಿಗಳು ಹಾಗೂ ನಿರ್ದೇಶಕ ಬಂಧುಗಳ ಅಭ್ಯಾಸ ವರ್ಗವು ಡಿಸೆಂಬರ್ 2 ಮಂಗಳವಾರ “ನಮ್ಮ ಮನೆ ಹವ್ಯಕ ಭವನ” ಗುರುವಾಯನಕೆರೆ ಇಲ್ಲಿ ಜರಗಿತು.

ಕಾರ್ಯಕ್ರಮ ಉದ್ಘಾಟಿಸಿ ಭಾರತಮಾತೆ ಹಾಗೂ ಲಕ್ಷ್ಮಣರಾವ್ ಇನಂದಾರ್ ರವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದ ಉಜಿರೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಪುಷ್ಪವತಿ ಆರ್ ಶೆಟ್ಟಿ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಭಾರತಿ ವತಿಯಿಂದ ಜಿಲ್ಲಾ ಮಹಿಳಾ ಅಭ್ಯಾಸ ವರ್ಗ ನಡೆಸಲಾಗುತ್ತಿದ್ದು ಸಹಕಾರಿ ಭಾರತಿ ಬಂಧುಗಳು ಅಭ್ಯಾಸ ವರ್ಗದಲ್ಲಿ ಸಿಗುವಂತ ಮಾಹಿತಿಯನ್ನು ಪಡೆದುಕೊಂಡು ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ಸಹಕಾರ ಭಾರತಿ ಕ್ಷೇತ್ರದ ಬಲವರ್ಧನೆಗೆ ಕಾರಣವಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಹಕಾರ ಭಾರತಿ ಕರ್ನಾಟಕ ರಾಜ್ಯ ಮಹಿಳಾ ಪ್ರಮುಖ ವಿದ್ಯಾ ಪೈ ಮಾತನಾಡಿ ಸಹಕಾರ ಕ್ಷೇತ್ರದ ಬೆಳವಣಿಗೆಯಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದ್ದು, ಮಹಿಳೆಯರು ಇನ್ನಷ್ಟು ಸಹಕಾರಿಗಳಾಗಿ ತನ್ನದೇ ಆದ ಕೊಡುಗೆಯನ್ನು ನೀಡಿ ದಕ್ಷಿಣ ಕನ್ನಡ ಸಹಕಾರ ಭಾರತಿಗೆ ಮತ್ತಷ್ಟು ಶಕ್ತಿ ತುಂಬಿಸುವ ಕೆಲಸ ಮಹಿಳೆಯರಿಂದ ಆಗಲಿ ಎಂದರು.
ಸಭಾ ಕಾರ್ಯಕ್ರಮದ ಬಳಿಕ ಸಂಪನ್ಮೂಲ ವ್ಯಕ್ತಿಗಳಾಗಿ ಸಹಕಾರ ಭಾರತಿ ಕರ್ನಾಟಕದ ರಾಷ್ಟ್ರೀಯ ಗ್ರಾಹಕ ಪ್ರಕೋಷ್ಠದ ಸಂಚಾಲಕಿ ಶ್ರೀಮತಿ ಭಾರತಿ ಭಟ್ ಸಹಕಾರ ಭಾರತಿಯ ಪರಿಚಯದ ಬಗ್ಗೆ ಹಾಗೂ ಶ್ರೀನಿವಾಸ್ ಮಹಾವಿದ್ಯಾಲಯ ಮಂಗಳೂರಿನ ಸಂಶೋಧನಾ ಪ್ರಾಧ್ಯಾಪಕಿ ಡಾ. ಸುಧಾ ಕೆ ಮಹಿಳೆಯರ ಬೆಳವಣಿಗೆಯಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಬಗ್ಗೆ ಮಾಹಿತಿ ನೀಡಿದರು.

ನಂತರ ನಡೆದ ಸಮಾರೋಪ ಸಮಾರಂಭ ದಲ್ಲಿ ಸಮಾರೋಪ ನುಡಿಗಳನ್ನಾಡಿದ ದಕ್ಷಿಣ ಕನ್ನಡ ಬಾಲನ್ಯಾಯ ಮಂಡಳಿ ಸದಸ್ಯೆ ಪದವು ವ್ಯವಸಾಯ ಸಹಕರಿ ಸಂಘದ ಅಧ್ಯಕ್ಷ ನ್ಯಾಯವಾದಿ ಸುಮನಾ ಶರಣ್ ಮಹಿಳೆಯರನ್ನು ಉತ್ತಮ ಸಹಕಾರಿ ಗಳಾಗಿ ರೂಪಿಸುವ ಉದ್ದೇಶದಿಂದ ಮಹಿಳಾ ಅಭ್ಯಾಸ ವರ್ಗ ಮಾಡಿದ್ದು , ಇದರ ಸದುಪಯೋಗ ಪಡೆದುಕೊಂಡವರು ಉತಮ ಸಹಕಾರಗಳಾಗಿ ಸಹಕಾರ ಭಾರತೀಯ ಘನತೆ ಗೌರವ ಗಳಿಗೆ ಬಾಗಿಗಳಾಗಿ ಎಂದರು.
ಜಿಲ್ಲಾ ಸಹಕಾರ ಭಾರತೀಯ ಅಧ್ಯಕ್ಷ ಸುಧಾಕರ ರೈ ಬೋಳಂತೂರು ಸಹಕಾರಿ ಕ್ಷೇತ್ರದ ಬೈಲಾ ಹಾಗೂ ಕಾಯ್ದೆಗಳಲ್ಲಿ ಕಾಲಕಾಲಕ್ಕೆ ಆಗುವ ಬದಲಾವಣೆಗಳ ಬಗ್ಗೆ ಮಹಿಳೆ ಸರಿಯಾದ ಮಾಹಿತಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಹಕಾರ ಭಾರತಿ ರಾಜ್ಯ ಮಹಿಳಾ ಪ್ರಮುಖ ವಿಜೇತಾ ರೈ, ರಾಜ್ಯ ಸಹಕಾರ ಭಾರತಿ ಪ್ರಧಾನ ಕಾರ್ಯದರ್ಶಿ, ನರಸಿಂಹ ಕಾಮತ್ ಸಾಣೂರು,ಸಂಘಟನಾ ಕಾರ್ಯದರ್ಶಿ ಮಂಜುನಾಥ್, ರಾಜ್ಯ ಕಾರ್ಯದರ್ಶಿ ಗಣೇಶ್ ಶೆಣೈ,ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುಧಾಕರ್ ರೈ, ಉಪಾಧ್ಯಕ್ಷರುಗಳಾದ ವಿಶ್ವನಾಥ ಎಮ್, ಕೆ ವಿ ಪ್ರಸಾದ್, ಕೆಎಂಎಫ್ ನಿರ್ದೇಶಕರುಗಳಾದ ಭರತ್ ನೆಕ್ಕರಾಜೆ, ಪ್ರಭಾಕರ್, ಸವಿತಾ ಎನ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಭಾರತಿ ಉಪಾಧ್ಯಕ್ಷ ವಿಮಲಾ ಸೋಮಶೇಖರ್ ಪೈಕ ಅರಂತೋಡು, ಜಿಲ್ಲಾ ಕಾರ್ಯದರ್ಶಿ ಶ್ರೀಲತಾ ಕೆ ಶೆಟ್ಟಿ ಕರೋಪಾಡಿ, ಸಹಕಾರ ಭಾರತಿ ಮಂಗಳೂರು ತಾಲೂಕು ಮಹಿಳಾ ಪ್ರಮುಖ್ ಲತಾ ಹೆಗ್ಡೆ, ಕಡಬ ತಾಲೂಕು ಪ್ರಮುಖ್ ಭಾರತಿ ದಿನೇಶ್, ಬಂಟ್ವಾಳ ತಾಲೂಕು ಪ್ರಮುಖ್ ಶಾಂತ ಡಿ ಚೌಟ, ಬೆಳ್ತಂಗಡಿ ತಾಲೂಕು ಪ್ರಮುಖ್ ಭಾರತಿ ಕೆ ಕಣಿಯೂರು, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಸುಂದರ್ ಹೆಗ್ಡೆ, ಜಿಲ್ಲಾ ಪ್ಯಾಕ್ಸ್ ಪ್ರೊಕೋಸ್ಟದ ಈಶ್ವರ ನಾಯ್ಕ್, ಮಂಗಳೂರು ಗ್ರಾಮಾಂತರ ಅಧ್ಯಕ್ಷ ದಯಾನಂದ ಪೈ, ಬೆಳ್ತಂಗಡಿ ಅಧ್ಯಕ್ಷ ವೆಂಕಪ್ಪಯ್ಯ ಮೊದಲದವರು ಉಪಸ್ಥಿತರಿದ್ದರು.

ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕಿ ವಿಜಯ ಪ್ರಕಾಶ್ ಸಹಕಾರ ಗೀತೆ ಹಾಡಿದರು. ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಪ್ರಮುಖ ಸುಭದ್ರ ಎಸ್ ರಾವ್ ಪೆರ್ಮಕಿ ಪ್ರಸ್ತಾವನೆದೊಂದಿಗೆ ಸ್ವಾಗತಿಸಿದರು, ಮಹಿಳಾ ಸಹ ಪ್ರಮುಖ ಅಮೂಲ್ಯ ಶೆಟ್ಟಿ ಕಟೀಲು ವಂದಿಸಿದರು. ಧನ್ಯ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.


