ಉಜಿರೆ: (ಡಿ.4) ಉಜಿರೆ ಎಸ್.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಡಿ.4 ರಂದು ಪ್ರೌಢಶಾಲಾ ಬಾಲಕರಿಗೆ “ನಿನ್ನನ್ನು ನೀನು ತಿಳಿದುಕೋ” ಎಂಬ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ ಎಸ್.ಡಿ.ಎಮ್ ಪದವಿ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಶ್ಯಾಮಿಲ ಇವರು ಪ್ರೌಢಾವಸ್ಥೆಯಲ್ಲಿ ತಿಳಿದಿರಬೇಕಾದ ಮಾನಸಿಕ, ಭಾವನಾತ್ಮಕ ಹಾಗೂ ದೈಹಿಕ ವಿಷಯದ ಕುರಿತಾಗಿ ಮಾಹಿತಿ ಹಂಚಿಕೊಂಡರು.


ಶಾಲಾ ಶೈಕ್ಷಣಿಕ ಸಂಯೋಜಕರಾದ ಶಿಕ್ಷಕಿ ಸುಮಾ ಶ್ರೀನಾಥ್ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕ ಜಾರ್ಜ್ ನಿರೂಪಿಸಿದರು.



