Thu. Dec 4th, 2025

shocking news: ತನಗಿಂತ ನೋಡಲು ಅಂದವಾಗಿದ್ದಾರೆಂಬ ಅಸೂಯೆ – 3 ಹುಡುಗಿಯರು, ಹೆತ್ತ ಮಗನನ್ನೂ ಮುಳುಗಿಸಿ ಕೊಂದ ಸೈಕೋ ಮಹಿಳೆ

ಪಾಣಿಪತ್ : ಮಧ್ಯವಯಸ್ಕ ಮಹಿಳೆಯೊಬ್ಬಳು ತನಗಿಂತ ಹೆಚ್ಚು ಸುಂದರವಾಗಿದ್ದ ಬಾಲಕಿಯರ ಮೇಲಿನ ಅಸೂಯೆಯಿಂದ ಮೂವರು ಹುಡುಗಿಯರನ್ನು ನೀರಿನಲ್ಲಿ ಮುಳುಗಿಸಿ ಕೊಂದಿದ್ದಾಳೆ. ಬಳಿಕ ತನ್ನ ಸ್ವಂತ ಮಗನನ್ನು ಕೂಡ ಕೊಲೆ ಮಾಡಿದ್ದಾಳೆ. ಹೀಗೆ ಕೊಲೆಯಾದ ಬಾಲಕಿಯರಲ್ಲಿ ಆಕೆಯ ಅಣ್ಣನ ಮಗಳೂ ಸೇರಿದ್ದಾಳೆ. ತನ್ನ ಸೋದರ ಸೊಸೆ ತನಗಿಂತ ಸುಂದರವಾಗಿದ್ದಾಳೆ ಎಂಬ ಅಸೂಯೆಯಿಂದ ಆಕೆ ಅವಳನ್ನೂ ಕೊಂದಿದ್ದಾಳೆ.

ಇದನ್ನೂ ಓದಿ: ⭕ಉಪ್ಪಿನಂಗಡಿ: ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ – ಆರೋಪಿ ಅರೆಸ್ಟ್

ಹರಿಯಾಣದ ಪಾಣಿಪತ್‌ನ ಅಧಿಕಾರಿಗಳು 4 ಮಕ್ಕಳನ್ನು ನೀರಿನ ಟಬ್‌ಗಳು ಅಥವಾ ಟ್ಯಾಂಕ್‌ಗಳಲ್ಲಿ ಮುಳುಗಿಸಿ ಕೊಂದ ಆರೋಪದ ಮೇಲೆ ಆ ಮಹಿಳೆಯನ್ನು ಬಂಧಿಸಿದ್ದಾರೆ. ಪಾಣಿಪತ್​​ನ ನೌಲ್ತಾ ಗ್ರಾಮದಲ್ಲಿ 6 ವರ್ಷದ ಬಾಲಕಿಯ ಇತ್ತೀಚಿನ ಸಾವಿನ ನಂತರ ತನಿಖೆ ಪ್ರಾರಂಭವಾಯಿತು. ಮೊದಲು ಇದು ಆಕಸ್ಮಿಕ ಸಾವು ಎಂದು ಭಾವಿಸಲಾಗಿತ್ತು. ಆದರೆ 6 ವರ್ಷದ ಆ ಬಾಲಕಿ ಕೇವಲ 1 ಅಡಿ ನೀರಿದ್ದ ಟಬ್​​ನಲ್ಲಿ ಮುಳುಗುವುದು ಹೇಗೆಂಬ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು.

ಪೊಲೀಸರ ಪ್ರಕಾರ, ಆ ಮಹಿಳೆ ತನಗಿಂತ ಹೆಚ್ಚು ಸುಂದರಿಯಾಗಿದ್ದಾರೆ ಎಂದು 3 ಹುಡುಗಿಯರನ್ನು ಗುರಿಯಾಗಿಸಿಕೊಂಡಿದ್ದಳು. ಸೋನಿಪತ್‌ನ ಬೋಹಾದ್ ಗ್ರಾಮದಲ್ಲಿ ತನ್ನ ಅಣ್ಣನ ಮಗಳನ್ನು ಕೊಂದು ನಂತರ ಅನುಮಾನ ಬರದಂತೆ ತನ್ನ ಸ್ವಂತ ಮಗನನ್ನು ಕೂಡ ನೀರಿನಲ್ಲಿ ಮುಳುಗಿಸಿದ್ದಳು. ಇದಾದ ನಂತರದ ಕೊಲೆಗಳು ಆಕೆಯ ತಾಯಿಯ ಮನೆಯಲ್ಲಿ ಮತ್ತು ಇತ್ತೀಚೆಗೆ ನೌಲ್ತಾ ಗ್ರಾಮದಲ್ಲಿ ನಡೆದ ಮದುವೆಯ ಸಮಯದಲ್ಲಿ ನಡೆದವು.

ಪ್ರತಿಯೊಂದು ಸಾವುಗಳು ಇದೇ ರೀತಿಯಲ್ಲಿ ನಡೆದಿದ್ದು, ಮಕ್ಕಳು ಆಳವಿಲ್ಲದ ಟಬ್​​ನ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದು ಕಂಡುಬಂದಿದೆ. ಒಂದು ಪ್ರಕರಣದಲ್ಲಿ, ಬಳಸಿದ ಟಬ್ ಕೇವಲ ಒಂದು ಅಡಿ ಆಳದಲ್ಲಿತ್ತು. ಮಗುವಿನ ಎತ್ತರವನ್ನು ನೋಡಿದ ಪೊಲೀಸರಿಗೆ ಇದು ಆಕಸ್ಮಿಕ ಸಾವಲ್ಲ ಎಂಬ ಅನುಮಾನ ಮೂಡಿತ್ತು. ಈ ಕಾರಣದಿಂದಲೇ ಅವರು ತನಿಖೆ ಆರಂಭಿಸಿದಾಗ ಅಚ್ಚರಿಯ ಸತ್ಯಗಳು ಹೊರಬರಲಾರಂಭಿಸಿದವು.

ಸೋದರತ್ತೆಯಾಗಿದ್ದ ಆಕೆ ತನ್ನ ಸೋದರ ಸೊಸೆ ತನಗಿಂತ ಚಂದವಾಗಿದ್ದಾಳೆ ಎಂದು ಆಕೆಯನ್ನೂ ಕೊಂದಿದ್ದಳು. ಈ ವಿಚಾರ ಆಕೆಯ ಕುಟುಂಬಸ್ಥರನ್ನು ಬೆಚ್ಚಿ ಬೀಳಿಸಿದೆ. ಹೆತ್ತ ಮಗನನ್ನೂ ಬಿಡದೆ ಕೊಲೆ ಮಾಡಿದ ಹೆಂಗಸನ್ನು ತಾವು ಇಷ್ಟು ದಿನ ಮನೆಯಲ್ಲಿಟ್ಟುಕೊಂಡಿದ್ದವಲ್ಲ ಎಂದು ಅವರು ಶಾಕ್ ಆಗಿದ್ದಾರೆ. ಕೊಲೆ ಮಾಡಿದ ನಂತರ ಆ ಸೈಕೋ ಮಹಿಳೆ ಸೆಲೆಬ್ರೇಟ್ ಮಾಡುತ್ತಿದ್ದಳು.

ವಿಚಾರಣೆ ವೇಳೆ ಆಕೆ ತನ್ನ ಮಗನನ್ನೂ ಸೇರಿದಂತೆ 4 ಮಕ್ಕಳನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾಳೆ. ಅವರಲ್ಲಿ ಮೂವರು ಅವಳ ಸಂಬಂಧಿಕರ ಮಕ್ಕಳು ಮತ್ತು ಒಬ್ಬ ಆಕೆಯ ಸ್ವಂತ ಮಗ.

Leave a Reply

Your email address will not be published. Required fields are marked *