Thu. Dec 4th, 2025

Ujire: Awareness program for the students of Ujire SDM English Medium (CBSE) School

ಉಜಿರೆ: (ಡಿ.4) ಉಜಿರೆ ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಡಿ.4 ರಂದು ಪ್ರೌಢಶಾಲಾ ಬಾಲಕಿಯರಿಗೆ “ಬ್ಲೂಮಿಂಗ್ ಇಂಟು ಟೀನ್ಸ್ (Blooming into Teens)” ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇದನ್ನೂ ಓದಿ: 🔵ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿಗಳಿಗೆ

ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ಇಕೋ ಹಬ್ ನ ಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೈಶಾಖ ಕುಲಕರ್ಣಿ ಇವರು ಪ್ರೌಢಾವಸ್ಥೆಯಲ್ಲಿ ಬಾಲಕಿಯರು ತಿಳಿದಿರಬೇಕಾದ ಮಾನಸಿಕ, ಭಾವನಾತ್ಮಕ, ದೈಹಿಕ ಹಾಗೂ ಆಹಾರ ಪದ್ಧತಿಯ ವಿಷಯದ ಕುರಿತಾಗಿ ಮಾಹಿತಿ ಹಂಚಿಕೊಂಡರು.

ಉಜಿರೆ ಎಸ್.ಡಿ.ಎಂ ಐ.ಟಿ ಕಾಲೇಜಿನ ಮುಖ್ಯ ಗ್ರಂಥಪಾಲಕರಾದ ಡಾ. ರಜತಾ. ಪಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕಿ ಸವಿತಾ ವೇದಪ್ರಕಾಶ್ ನಿರೂಪಿಸಿ ಶಾಲಾ ಪ್ರಾಂಶುಪಾಲರಾದ ಶ್ರೀ ಮನ್ಮೋಹನ್ ನಾಯ್ಕ್ ಕೆ.ಜಿ ಸ್ವಾಗತಿಸಿದರು.

Leave a Reply

Your email address will not be published. Required fields are marked *