ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ.) ಅಳಿಕೆ ವಲಯ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವಿಟ್ಲ ತಾಲೂಕು,

ಇದನ್ನೂ ಓದಿ: 🟣ಉಜಿರೆ: ಎಸ್.ಡಿ.ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ – ರಾಜ್ಯ ಮಟ್ಟದ ಮಹಿಳೆಯರ ತ್ರೋಬಾಲ್ ಪಂದ್ಯಾಟ
ಶ್ರೀ ಮಹಿಷಮರ್ದಿನಿ ದೇವಸ್ಥಾನ ಪುಣಚ ಇವರ ಸಹಯೋಗದೊಂದಿಗೆ ದಿನಾಂಕ 21-12.2025ನೇ ರವಿವಾರ ಶ್ರೀ ಮಹಿಷಮರ್ದಿನಿ ದೇವಸ್ಥಾನ ಪುಣಚದಲ್ಲಿ ನಡೆಯುವ ಭಜನೋತ್ಸವ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ಮಹಿಷಮರ್ದಿನಿ ದೇವರ ಸನ್ನಿಧಿ ಪುಣಚದಲ್ಲಿ ಶುಕ್ರವಾರ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಮಾರಪ್ಪ ಶೆಟ್ಟಿ ಬೈಲು ಗುತ್ತು ಅರ್ಚಕರಾದ ಶ್ರೀ ಕೃಷ್ಣಬನ್ನಿಂತಾಯ ಭಜನಾ ಪರಿಷತ್ತಿನ ಅಳಿಕೆ ವಲಯದ ಅಧ್ಯಕ್ಷರಾದ ಬಾಬು ನಾಯ್ಕ ಅಜ್ಜಿನಡ್ಕ ಪ್ರಗತಿ ಬಂಧು ಸ್ವಸಹಾಯ ಸಂಘಗಳ ವಲಯದಾಕ್ಷರಾದ ರಾಜೇಂದ್ರ ರೈ ಬೈಲುಗುತ್ತು ಭಜನೋತ್ಸವ ಸಮಿತಿಯ ಕೋಶಾಧಿಕಾರಿ ಕಿರಣ್ ಚಂದ್ರ ಎಂ ಪುಣಚ,



ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಬೇಬಿ ಪಟಿಕಲ್ಲು ಅಳಿಕೆ ವಲಯ ಮೇಲ್ವಿಚಾರಕರಾದ ಶ್ರೀಮತಿ ಮೀನಾಕ್ಷಿ ಸೇವಾಪ್ರತಿನಿಧಿಗಳಾದ ಶ್ರೀಮತಿ ಪೂರ್ಣಿಮಾ ಮತ್ತು ಶ್ರೀಮತಿ ಸರಸ್ವತಿ ಹಾಗೂ ದೇವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳು ಮತ್ತು ಅಳಿಕೆ ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.


