ಕಟಪಾಡಿ: ಕಟಪಾಡಿ ಎಸ್. ವಿ. ಎಸ್. ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯಾದ ಎಸ್ ವಿ. ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ ಭಾಸ್ಕರ ಕಾಮತ್ ಬಿ. ಇವರನ್ನು ವಿದ್ಯಾವರ್ಧಕ ಸಂಘದ ವತಿಯಿಂದ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ: ⭕ಬೆಳ್ತಂಗಡಿ: ವಿವಾಹಿತ ಮಹಿಳೆ ನಾಪತ್ತೆ
ನಿವೃತ್ತರು ಈ ಸಂದರ್ಭದಲ್ಲಿ ಸಾರ್ಥಕ ಸೇವೆ ಸಲ್ಲಿಸಲು ಅವಕಾಶ ಮಾಡಿ ಕೊಟ್ಟ ಸಂಘಕ್ಕೆ ಧನ್ಯವಾದ ಸಲ್ಲಿಸಿದರು. ಅಧ್ಯಕ್ಷತೆಯನ್ನು ನಿರ್ವಹಿಸಿದ ಸಂಘದ ಕಾರ್ಯದರ್ಶಿಗಳಾದ ಶ್ರೀ ಕೆ ಸತ್ಯೇಂದ್ರ ಪೈ ಇವರು ನಿವೃತ್ತರ ಸೇವಾ ತತ್ಪರತೆಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಶ್ರೀ ಕೆ. ನಿತ್ಯಾನಂದ ಶೆಣೈ, ಶ್ರೀ ವೆಂಕಟರಮಣ ಭಟ್, ಶ್ರೀ ಕೆ.ಗಣೇಶ್ ಕಿಣಿ, ಶ್ರೀ ಬಿ. ಚಂದ್ರಕಾಂತ ಪೈ, ಶ್ರೀ ಶ್ರೀನಿವಾಸ ವಾಸುದೇವ ಕಿಣಿ, ಆಡಳಿತಾಧಿಕಾರಿಗಳಾದ ಶ್ರೀ ಸುಧಾಕರ್ ಬ್ರಹ್ಮಾವರ, ಶ್ವೇತಾ, ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಶ್ರೀನಿವಾಸ ಶೆಣೈ ಉಪಸ್ಥಿತರಿದ್ದರು.





