Sat. Dec 6th, 2025

Shivamogga: ಡೆತ್‌ ನೋಟ್‌ ಬರೆದಿಟ್ಟು ತಾಯಿ ಆತ್ಮಹತ್ಯೆ – ತಾಯಿಯ ಡೆತ್‌ ನೋಟ್‌ ನೋಡಿ ಮಗನೂ ಆತ್ಮಹತ್ಯೆ

ಶಿವಮೊಗ್ಗ: ಅಶ್ವಥ್ ನಗರ ಬಡಾವಣೆಯಲ್ಲಿ ಪ್ರತಿಷ್ಠಿತ ವೈದ್ಯೆ ಮತ್ತು ಅವರ ಮಗ ಒಂದೇ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ: ⭕ಚಿತ್ರದುರ್ಗ : ಕಾಮದ ಅಮಲಿನಲ್ಲಿ ಹೆತ್ತ ಮಕ್ಕಳ ಮೇಲೆ ಅತ್ಯಾಚಾರವೆಸಗಿದ ಕಾಮುಕ ತಂದೆ

ಪ್ರಸೂತಿ ಆಸ್ಪತ್ರೆಯನ್ನು ನಡೆಸುತ್ತಿದ್ದ ಡಾ. ಜಯಶ್ರೀ (55) ಹಾಗೂ ಅವರ ಮಗ ಆಕಾಶ್ (34) ಆತ್ಮಹತ್ಯೆಗೆ ಶರಣಾದವರು.

ಡಾ. ಜಯಶ್ರೀ ಅವರು ತಮ್ಮ ಮನೆಯ ಕೆಳ ಅಂತಸ್ತಿನಲ್ಲಿ ಪ್ರಾಣ ಕಳೆದುಕೊಂಡಿದ್ದರೆ, ಪುತ್ರ ಆಕಾಶ್ ಮೊದಲ ಮಹಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ತಾಯಿ ಮತ್ತು ಮಗ ಇಬ್ಬರೂ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂಬ ಮಾಹಿತಿಯಿದೆ. ಅದರಲ್ಲಿ ತಮ್ಮ ಹೆಸರಿನಲ್ಲಿದ್ದ ಆಸ್ತಿಯನ್ನು ಸೊಸೆಯ ಹೆಸರಿಗೆ ಬರೆದಿಟ್ಟು ಬಳಿಕ ಈ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕೌಟುಂಬಿಕ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ. 15 ತಿಂಗಳ ಹಿಂದೆ ಮೃತ ಆಕಾಶ್ ಅವರ ಮೊದಲ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ ಮೇ ತಿಂಗಳಲ್ಲಿ ಆಕಾಶ್ ಅವರಿಗೆ ಎರಡನೇ ಮದುವೆಯಾಗಿತ್ತು.

ಮೂಲಗಳ ಪ್ರಕಾರ, ಆಕಾಶ್‌ ರಿಯಲ್ ಎಸ್ಟೇಟ್‌ನಲ್ಲಿ ತಾನು ಹಣ ತೊಡಿಸಬೇಕು ಎಂದು ಅದಕ್ಕಾಗಿ ನನಗೆ ಹಣ ಬೇಕು ಎಂದು ಕೇಳುತ್ತಿದ್ದ ಎನ್ನಲಾಗುತ್ತಿದೆ. ಇದಕ್ಕೋಸ್ಕರನೇ ತಾಯಿ ಮತ್ತು ಮಗನ ಮಧ್ಯೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು. ಇದು ಇತ್ತೀಚಿಗೆ ಮದುವೆಯಾಗಿ ಬಂದ ನವ್ಯಗೆ ಕೂಡ ಮಾಮೂಲಾಗಿತ್ತು. ಆದರೆ ಈ ಜಗಳ ವಿಕೋಪಕ್ಕೆ ಹೋಗಿದ್ದು ಅದು ಈ ಆತ್ಮಹತ್ಯೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಈ ಪ್ರಕರಣದಲ್ಲಿ ಮೊದಲು ಡಾಕ್ಟರ್ ಜಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದು ಡೆತ್ ನೋಟ್ ಬರೆದಿಟ್ಟಿದ್ದಾರೆ ಇದನ್ನು ನೋಡಿದ ಮಗ ಆಕಾಶ್ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಆದರೆ ಮತ್ತೊಂದು ಮೂಲಗಳ ಪ್ರಕಾರ ಇಬ್ಬರಿಗೂ ಮೊದಲನೇ ಪತ್ನಿಯ ಸಾವಿನ ಭಯ, ಖಿನ್ನತೆ ಕಾಡುತ್ತಿತ್ತು ಎನ್ನಲಾಗುತ್ತಿದೆ. ಮೂಲತಃ ನ್ಯಾಮತಿಯ ನಿವಾಸಿಗಳಾದ ಹೊಮ್ಮರಡಿ ಕುಟುಂಬಕ್ಕೆ ಆಸ್ತಿಗೇನು ಕೊರತೆ ಇರಲಿಲ್ಲ 25 ಎಕರೆ ತೋಟ, ಇರಲು ಮನೆ, ಹೊಮ್ಮರಡಿ ಕಾಂಪ್ಲೆಕ್ಸ್ ಅದರ ಬಾಡಿಗೆ ಹಣ, ಹೊನ್ನಾಳಿಯಲ್ಲಿ ಸೈಟ್‌ಗಳು ಎಲ್ಲವೂ ಇದ್ದವು ಆದರೆ ಬಹು ಮುಖ್ಯವಾಗಿ ಬೇಕಾಗಿದ್ದ ಮಾನಸಿಕ ನೆಮ್ಮದಿ ಇರಲಿಲ್ಲ ಅದುವೇ ಈ ಆತ್ಮಹತ್ಯೆಗೆ ಕಾರಣವಾಗಿರಬಹುದು ಎನ್ನಲಾಗಿದೆ.

Leave a Reply

Your email address will not be published. Required fields are marked *