Sun. Dec 7th, 2025

Ujire:‌ ಉಜಿರೆ ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಜಿಲ್ಲಾ ಮಟ್ಟದ ಅಂತರ್ ಶಾಲಾ ಈಜು ಸ್ಪರ್ಧೆ

ಉಜಿರೆ: ಉಜಿರೆ ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಡಿ.6 ರಂದು ದ.ಕ ಹಾಗೂ ಉಡುಪಿ ಜಿಲ್ಲೆಯ ಐ.ಸಿ.ಎಸ್.ಇ (Indian Certificate of Secondary Education) ಹಾಗೂ ಸಿ.ಬಿ.ಎಸ್.ಇ (Central Board of Secondary Education) ಶಾಲೆಗಳ ಸಹಯೋಗದೊಂದಿಗೆ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ “SDM SPLASH 2025” ಅಂತರ್ ಶಾಲಾ ಜಿಲ್ಲಾ ಮಟ್ಟದ ಈಜು ಸ್ಪರ್ಧೆ ಆಯೋಜಿಸಲಾಗಿತ್ತು.

ಇದನ್ನೂ ಓದಿ: 💐💐ಉಜಿರೆ: ಕರುನಾಡು Got ಟ್ಯಾಲೆಂಟ್ ರಿಯಾಲಿಟಿ ಶೋ ಗೆ ಆಯ್ಕೆಯಾದ ಉಜಿರೆಯ ಹಿಪ್-ಬಾಯ್ಸ್ ನೃತ್ಯ ತಂಡ

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಕಾರ್ಯಕ್ರಮ ಉದ್ಘಾಟಿಸಿ ಆಗಮಿಸಿದ ಎಲ್ಲಾ ಶಾಲೆಯ ಸ್ಪರ್ಧೆಗಳಿಗೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಮ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಮ್. ಜನಾರ್ಧನ್ ಹಾಗೂ ಮಂಗಳೂರಿನ ಜೈ ಹಿಂದ್ ಸ್ವಿಮ್ಮಿಂಗ್ ಕ್ಲಬ್ ಮುಖ್ಯ ಈಜು ತರಬೇತುದಾರರಾದ ಶ್ರೀ ರಾಮಕೃಷ್ಣ ರಾವ್ ಆಗಮಿಸಿ ವಿಜೇತರಾದ ಸ್ಪರ್ಧಿಗಳನ್ನು ಅಭಿನಂದಿಸಿ ಬಹುಮಾನ ವಿತರಿಸಿದರು.

ಸ್ಪರ್ಧೆಯಲ್ಲಿ ದ.ಕ ಹಾಗೂ ಉಡುಪಿ ಜಿಲ್ಲೆಯ 20 ಶಾಲೆಗಳಿಂದ ಸುಮಾರು 200 ಸ್ಪರ್ಧಿಗಳು ಭಾಗವಹಿಸಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಮ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ್, ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಶ್ರೀ ಧನ್ಯಕುಮಾರ್, ಮಂಗಳೂರಿನ ವಿ ವನ್ ಆಕ್ವಾ ಸೆಂಟರ್ ನ ನಿರ್ದೇಶಕರಾದ ಶ್ರೀ ನವೀನ್, ಎಸ್.ಡಿ. ಎಮ್ ಸ್ಪೋರ್ಟ್ಸ್ ಕ್ಲಬ್ ಕ್ರೀಡಾ ಕಾರ್ಯದರ್ಶಿ ಶ್ರೀ ರಮೇಶ್ ಉಪಸ್ಥಿತರಿದ್ದರು.

ಶಾಲಾ ಶಿಕ್ಷಕಿ ನೀತು ಪ್ರಸಾದ್ ಹಾಗೂ ಉಜಿರೆ ಎಸ್.ಡಿ.ಎಮ್ ಬಿ.ಎನ್.ವೈ.ಎಸ್ ಕಾಲೇಜಿನ ಪಿ.ಡಿ ಶ್ರೀ ಧರ್ಮೇಂದ್ರ ಇವರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *