ಉಜಿರೆ: ಕರ್ನಾಟಕದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಿರುವ, NP Production ನಲ್ಲಿ ಸ್ಪಂದನ ಟಿ.ವಿ. ಪ್ರಸ್ತುತಪಡಿಸುವ ರಾಜ್ಯದ ಅತೀ ದೊಡ್ಡ ಮಲ್ಟಿ ಟ್ಯಾಲೆಂಟ್ ರಿಯಾಲಿಟಿ ಶೋ ಕರುನಾಡು Got ಟ್ಯಾಲೆಂಟ್ ನ ಸೀಸನ್ 2 ಕ್ಕೆ ಉಜಿರೆಯ HIPBOYZ ಡಾನ್ಸ್ ಕ್ರೀವ್ ತಂಡವು ಆಯ್ಕೆಯಾಗುವ ಮೂಲಕ ಸ್ಥಳೀಯ ಹೆಗ್ಗಳಿಕೆಯನ್ನು ಹೆಚ್ಚಿಸಿದೆ. ಇತ್ತೀಚೆಗೆ ನಡೆದ ಮೆಗಾ ಆಡಿಷನ್‌ನಲ್ಲಿ ಈ ತಂಡದ ಪ್ರದರ್ಶನ ತೀರ್ಪುಗಾರರ ಮೆಚ್ಚುಗೆ ಗಳಿಸಿದೆ.

ಇದನ್ನೂ ಓದಿ: 🟣ಬೆಳ್ತಂಗಡಿ: ಸರಕಾರದಿಂದ ಮಹತ್ವದ ಆದೇಶ
ದಿನಾಂಕ 6-12-2025 ರ ಶನಿವಾರದಂದು ನಡೆದ ಮೆಗಾ ಆಡಿಷನ್‌ನಲ್ಲಿ HIPBOYZ ಡಾನ್ಸ್ ಕ್ರೀವ್‌ನ ನೃತ್ಯಗಾರ್ತಿಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ತಂಡದಲ್ಲಿ ಸನ್ಮಿತಾ ಕುಕ್ಕಾವು, ಆಂಜೆಲಿನ್ ಡಿಸೋಜಾ, ದೀಕ್ಷಾ, ಧನ್ವಿ ಭಂಡಾರಿ, ಆಪ್ತ, ಅನ್ವಿತಾ, ರೇಖಾ, ಮನ್ವಿತಾ, ಧೃತಿ, ಮತ್ತು ಸಮನ್ವಿ ಸೇರಿ ಒಟ್ಟು ಹತ್ತು ಪ್ರತಿಭಾವಂತ ನೃತ್ಯಗಾರ್ತಿಯರು ಭಾಗವಹಿಸಿದ್ದರು. ಅವರ ಆಕರ್ಷಕ ನೃತ್ಯವು ಎಲ್ಲರ ಗಮನ ಸೆಳೆಯಿತು.

ತಂಡದ ಈ ಯಶಸ್ಸಿಗೆ ಉಜಿರೆಯ ನೃತ್ಯ ಗುರುಗಳಾದ ಸಹನ್ ಎಮ್. ಎಸ್. ಉಜಿರೆ ಅವರು ಕಾರಣಕರ್ತರಾಗಿದ್ದಾರೆ. ಅವರ ಸೃಜನಾತ್ಮಕ ನೃತ್ಯ ಸಂಯೋಜನೆ ಮತ್ತು ಮಾರ್ಗದರ್ಶನದಲ್ಲಿ ಈ ತಂಡವು ರಿಯಾಲಿಟಿ ಶೋನ ಎರಡನೇ ಹಂತಕ್ಕೆ ಆಯ್ಕೆಯಾಗಿದೆ. ಕರ್ನಾಟಕದ ಪ್ರತಿಷ್ಠಿತ ವೇದಿಕೆಯಲ್ಲಿ ಉಜಿರೆಯ ಪ್ರತಿಭೆಗಳು ಪ್ರಕಾಶಿಸಲು ಸಹನ್ ಅವರ ಪರಿಶ್ರಮ ಬೆನ್ನೆಲುಬಾಗಿದೆ.




