ಬಂದಾರು: (ಡಿ.08) ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಗೌರವಾರ್ಪಣಾ ಸಮಿತಿ, ಪೆರ್ಲ ಬೈಪಾಡಿ, ಬಾಲ ವಿಕಾಸ ಸಮಿತಿ ಅಂಗನವಾಡಿ ಕೇಂದ್ರ, ಪೋಷಕರು ಮತ್ತು ಹಳೆ ವಿದ್ಯಾರ್ಥಿಗಳು, ಸ್ತ್ರೀ ಶಕ್ತಿ ಸಂಘಗಳು, ಅಂಗನವಾಡಿ ಕೇಂದ್ರ ಪೆರ್ಲ-ಬೈಪಾಡಿ ಮತ್ತು ವಿವಿಧ ಸಂಘ ಸಂಸ್ಥೆಗಳು ಹಾಗೂ ಊರವರ ಆಶ್ರಯದಲ್ಲಿ ಡಿ. 06 ರಂದು ಅಂಗನವಾಡಿ ಕೇಂದ್ರ ಪೆರ್ಲ ಬೈಪಾಡಿ ವಠಾರದಲ್ಲಿ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ: 🟣ವಿಟ್ಲ: ಪೆರ್ನೆ ವಲಯದ ಕೆದಿಲ ‘ಬಿ’ ಕಾರ್ಯಕ್ಷೇತ್ರದ ಒಕ್ಕೂಟೋತ್ಸವ ಕಾರ್ಯಕ್ರಮ
ಬಂದಾರು ಗ್ರಾಮದ ಪೆರ್ಲಬೈಪಾಡಿ ಅಂಗನವಾಡಿದಲ್ಲಿ ಸುಮಾರು 30ವರ್ಷ ಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸಿದ ಎಂ ಸೇಸಮ್ಮ ರವರು ಅಕ್ಟೋಬರ್ 31 ರಂದು ನಿವೃತಿ ಗೊಂಡಿರುತ್ತಾರೆ,ಇವರಿಗೆ ಗೌರವಾರ್ಪಣೆ ಕಾರ್ಯಕ್ರಮ ನೆರವೇರಿತು. ಬಾಲವಿಕಾಸ ಸಮಿತಿ ಅಧ್ಯಕ್ಷೆ ಹೇಮಾವತಿ ಯವರು ದೀಪ ಬೆಳಗಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯರಾದ ಮಹಾಬಲ ಗೌಡ, ಹರೀಶ್ ಗೌಡ ಪರಪ್ಪಜೆ,ಬಂದಾರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಅನಿತಾ ಉದಯ ಕುರುಡoಗೆ, ಶ್ರೀಮತಿ ಭಾರತಿ,ಬಂದಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ,ಆಶಾ ಕಾರ್ಯಕರ್ತೆ ರಾಜೀವಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾಪ್ರತಿನಿಧಿ ಶ್ರೀಮತಿ ಪ್ರಮೀಳಾ ಇವರುಗಳು ಉಪಸ್ಥಿತರಿದ್ದರು. ರೇಷ್ಮಾ, ಚೇತನ, ವಾಣಿ ವಿ ಇವರುಗಳು ಪ್ರಾರ್ಥನೆಗೈದರು.


ಬಂದಾರು ಶಾಲೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶ್ರೀಮತಿ ಶಾರದಾ ವೈ ಸ್ವಾಗತಿಸಿ, ವಿಠಲ ಗೌಡ ಒಳಗುಡ್ಡೆ ನಿರೂಪಣೆಗೈದು, ಪೆರ್ಲ -ಬೈಪಾಡಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ವಾಣಿ. ವಿ ಧನ್ಯವಾದವಿತ್ತರು.ಈ ಸಂದರ್ಭದಲ್ಲಿ ಶೀನಪ್ಪ ಗೌಡ ಪರ್ಲಾರು ಮತ್ತು ಬಾಲಕೃಷ್ಣ ಗೌಡ ಪಾರೋಟ್ಟು ಇವರುಗಳು ಬೋಜನದ ವ್ಯವಸ್ಥೆ ಮಾಡಿದರು. ಕಾರ್ಯಕ್ರಮದ ಯಶಸ್ವಿಗೆ ಬಾಲವಿಕಾಸ ಸಮಿತಿ, ಪೋಷಕ ವೃಂದ ಊರದಾನಿಗಳು, ಸಂಘ ಸಂಸ್ಥೆಗಳ ಸಹಕರಿಸಿದರು.


