ಕುಪ್ಪೆಟ್ಟಿ: ಕುಪ್ಪೆಟ್ಟಿ ಶ್ರೀ ಗಣೇಶ ಭಜನಾಮಂದಿರದ ಆವರಣದಲ್ಲಿ ನೂತನ ರಾಜಗೋಪುರದ ವೈಭವದ ಲೋಕಾರ್ಪಣಾ ಸಮಾರಂಭ ನೆರವೇರಿತು. ಮೈಸೂರು ಮಹಾರಾಜ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಾಜಗೋಪುರವನ್ನು ಲೋಕಾರ್ಪಣೆ ಮಾಡಿದರು.

ಇದೇ ಸಂದರ್ಭದಲ್ಲಿ, ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಯತಿವರ್ಯರೊಂದಿಗೆ ಅತ್ಯಂತ ಭಕ್ತಿಪೂರ್ವಕವಾಗಿ ಸ್ವಾಗತಿಸಲಾಯಿತು. ಮಂತ್ರಘೋಷಗಳು ಮತ್ತು ಪೂರ್ಣಕುಂಭ ಸ್ವಾಗತದೊಂದಿಗೆ ಅವರನ್ನು ವೈಭವದ ಮೆರವಣಿಗೆಯ ಮೂಲಕ ಭಜನಾಮಂದಿರಕ್ಕೆ ಕರೆತರಲಾಯಿತು. ಈ ಕ್ಷಣವು ನೆರೆದಿದ್ದ ಭಕ್ತಾದಿಗಳ ಕಣ್ಮನ ಸೆಳೆಯಿತು.


ಇದನ್ನೂ ಓದಿ: ⭕ಪುತ್ತೂರು: ನೇಣುಬಿಗಿದುಕೊಂಡು ಯುವಕ ಆತ್ಮಹತ್ಯೆ
ರಾಜಗೋಪುರ ಮತ್ತು ಸಭಾಭವನದ ಲೋಕಾರ್ಪಣೆ ನಂತರ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಅನೇಕ ಧಾರ್ಮಿಕ ಮುಖಂಡರು, ಯತಿವರ್ಯರು, ಮತ್ತು ಗಣ್ಯವ್ಯಕ್ತಿಗಳು ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಧರ್ಮ, ಸಂಸ್ಕೃತಿ ಮತ್ತು ಸಮಾಜದ ಕುರಿತು ಚಿಂತನ-ಮಂಥನ ನಡೆಯಿತು. ಶ್ರೀ ಯದುವೀರ್ ಒಡೆಯರ್ ಮತ್ತು ಉದ್ಯಮಿ ಶ್ರೀ ಸದಾಶಿವ ಶೆಟ್ಟಿ ಸೇರಿದಂತೆ ಗಣ್ಯರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಮಾರಂಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.



