ಅಳದಂಗಡಿ: ಅಳದಂಗಡಿಯಲ್ಲಿ ಸುಸಜ್ಜಿತವಾದ ‘ದಿ ದಕ್ಷಿಣ್ ಭವನ’ ವೆಜ್ ರೆಸ್ಟೋರೆಂಟ್ ಮತ್ತು ‘ದಿ ಕ್ಯಾಪ್ಸಿ’ ಮಲ್ಟಿ ಕ್ಯುಸೀನ್ ರೆಸ್ಟೋರೆಂಟ್ ಮತ್ತು ಅರ್ವಾ ವೈನ್ ಪಾರ್ಲರ್ ಡಿಸೆಂಬರ್ .12 ರಂದು ಸ್ವರಾಜ್ ಟವರ್ಸ್, ಮುಖ್ಯ ರಸ್ತೆ, ಅಳದಂಗಡಿಯಲ್ಲಿ ಶುಭಾರಂಭಗೊಳ್ಳಲಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ, ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರ ಶುಭ ಹಾರೈಕೆಯೊಂದಿಗೆ ಈ ಸಂಸ್ಥೆ ಲೋಕಾರ್ಪಣಗೊಳ್ಳಲಿದೆ.
‘ದಿ ಕ್ಯಾಪ್ಸಿ’ಯಲ್ಲಿ ಕ್ಯಾಪ್ಸಿ ಕ್ಯಾಟರರ್ಸ್, ಕ್ಯಾಪ್ಸಿ ಹೋಮ್ ಫುಡ್ ಪ್ರಾಡಕ್ಟ್ಸ್ ಮತ್ತು ದಿ ಕ್ಯಾಪ್ಸಿ ಕಿಚನ್ ಸಹ ಸೇರಿದ್ದು, ಸಮಗ್ರ ಆಹಾರ ಮತ್ತು ಅಡುಗೆ ಸಂಬಂಧಿ ಸೇವೆಗಳನ್ನು ನೀಡಲಿದೆ.





