ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಪೇಟೆಯಲ್ಲಿರುವ ಅಂಗಡಿಯೊಂದರ ಮಾಲಕನ ವಿರುದ್ಧ 6ನೇ ತರಗತಿಯ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📍 ಪ್ರಕರಣದ ವಿವರ:
ಗೇರುಕಟ್ಟೆ ಪೇಟೆಯ ‘ಟಿಕ್ಕಾ ಪಾರ್ಕ್’ ಎಂಬ ಅಂಗಡಿಯ ಮಾಲಕ ಮಹಮ್ಮದ್ ಆರೋಪಿ ಎಂದು ಗುರುತಿಸಲಾಗಿದೆ. ಟಿಕ್ಕಾ ತರಲು ಹಾಗೂ ಟ್ಯೂಷನ್ಗೆ ಹೋಗುವಾಗ ಅಂಗಡಿಗೆ ಬರುತ್ತಿದ್ದ ಅಪ್ರಾಪ್ತ ಬಾಲಕಿಗೆ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಬಾಲಕಿ ತನ್ನ ಹೆತ್ತವರಲ್ಲಿ ಹೇಳಿಕೊಂಡ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಆರೋಪಿ ಅಂಗಡಿ ಮಾಲಕ, ಈ ಕೃತ್ಯದ ಬಗ್ಗೆ ಯಾರಿಗಾದರೂ ತಿಳಿಸಿದರೆ ಜೀವಬೆದರಿಕೆ ಹಾಕಿದ್ದಾಗಿ ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.
📸 ಸಿಸಿಟಿವಿ ಫೂಟೇಜ್ ವೈರಲ್ ಮಾಡಿ ಮಾನಸಿಕ ಕಿರುಕುಳ!
ಘಟನೆ ಬೆಳಕಿಗೆ ಬಂದ ನಂತರ, ಬಾಲಕಿಯ ಹೆತ್ತವರು ಆರೋಪಿಯನ್ನು ಪ್ರಶ್ನಿಸಲು ಹೋದಾಗ ಮಾತಿನ ಚಕಮಕಿ ನಡೆದು, ಆರೋಪಿ ಹಾಗೂ ಆತನ ಬೆಂಬಲಿಗರು ಅವರಿಗೆ ಬೆದರಿಕೆ ಹಾಕಿದ್ದಾರೆನ್ನಲಾಗಿದೆ.
ಅತ್ಯಂತ ಆಘಾತಕಾರಿ ಬೆಳವಣಿಗೆಯೆಂದರೆ, ಈ ಪ್ರಕರಣವನ್ನು ಮುಚ್ಚಿಹಾಕಲು ಆರೋಪಿ ಮಹಮ್ಮದ್ ಮತ್ತು ಆತನ ಬೆಂಬಲಿಗರು ಸೇರಿ ಬಾಲಕಿ ಅಂಗಡಿಗೆ ಬಂದಿದ್ದ ಸಿಸಿ ಕ್ಯಾಮೆರಾ ಫೂಟೇಜ್ನ್ನು ಮೊಬೈಲ್ ಮೂಲಕ ವೈರಲ್ ಮಾಡಿದ್ದಾರೆ. ವೀಡಿಯೋದಲ್ಲಿ ಕಳ್ಳತನದ ಆರೋಪ ಹೊರಿಸಿ, ಈಗಾಗಲೇ ಲೈಂಗಿಕ ಕಿರುಕುಳದಿಂದ ಆಘಾತಕ್ಕೊಳಗಾಗಿರುವ ಬಾಲಕಿಗೆ ಹೆಚ್ಚಿನ ಮಾನಸಿಕ ಯಾತನೆ ನೀಡಿದ್ದಾರೆಂದು ಆರೋಪಿಸಲಾಗಿದೆ.
💔 ಶಾಲೆಗೆ ಹೋಗಲು ಹಿಂಜರಿಯುತ್ತಿರುವ ಬಾಲಕಿ:
ವೀಡಿಯೋ ವೈರಲ್ನಿಂದ ಅವಮಾನಕ್ಕೊಳಗಾದ ಬಾಲಕಿ ಇದೀಗ ಶಾಲೆಗೆ ಹೋಗಲು ಹಿಂಜರಿಯುತ್ತಿದ್ದು, ಮಗಳ ಶಿಕ್ಷಣ ಮತ್ತು ಭವಿಷ್ಯದ ಬಗ್ಗೆ ಹೆತ್ತವರು ಚಿಂತಿತರಾಗಿದ್ದಾರೆ.
⚖️ ಮುಂದಿನ ಕ್ರಮ:
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಹಮ್ಮದ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಈ ಗಂಭೀರ ಪ್ರಕರಣವು ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೆಟ್ಟಿಲೇರಿದೆ ಎಂದು ತಿಳಿದುಬಂದಿದೆ.

