Thu. Dec 11th, 2025

ಕೊರಿಂಜ: ಶ್ರೀ ಪಂಚಲಿಂಗೇಶ್ವರ ಭಜನಾ ತಂಡಕ್ಕೆ ಸಮವ‌ಸ್ತ್ರ ವಿತರಣಾ ಕಾರ್ಯಕ್ರಮ

ಕೊರಿಂಜ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೊರಿಂಜ ಇಲ್ಲಿಯ ಶ್ರೀ ಪಂಚಲಿಂಗೇಶ್ವರ ಭಜನಾ ತಂಡದ ಸಮವ‌ಸ್ತ್ರ ವಿತರಣಾ ಕಾರ್ಯಕ್ರಮವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೊರಿಂಜದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಕಾರ್ತಿಕ್ ಹೆಗ್ಡೆ ಇವರು ವಿತರಿಸಿದರು.

ಸಮವಸ್ತ್ರ ಮಾಡಿರುವುದರಿಂದ ಭಜನೆಗೆ ಇನ್ನಷ್ಟು ಮೆರುಗು ನೀಡುತ್ತವೆ. ಭಜನೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ , ಆಯಸ್ಸು ,ಆರೋಗ್ಯ ವಿದ್ಯಾರ್ಥಿಗಳಲ್ಲಿ ಹೆಚ್ಚಾಗುತ್ತದೆ ಸಂಸ್ಕೃತಿಯನ್ನು ಬಿಂಬಿಸುವಂತಹ ಕೆಲಸವನ್ನು ಭಜನೆಯಿಂದ ಮಾಡಲು ಸಾಧ್ಯ ಅಂತ ಎಂದು ಹಿತನುಡಿಗಳನ್ನು ಹೇಳಿದರು.

ಈ ಸಂದರ್ಭದಲ್ಲಿ ಧ.ಗ್ರಾ.ಯೋಜನೆಯ ನಿವೃತ್ತ ಮೇಲ್ವಿಚಾರಕಿ ವಾರಿಜ ವಿ ಶೆಟ್ಟಿ ಉರುವಾಲು ಗ್ರಾಮದ ಸೇವಾ ಪ್ರತಿನಿಧಿ ಸೀತಾರಾಮ ಆಳ್ವ ಕೊರಿಂಜ,ಹಾಗೂ ಭಜನಾ ಗುರುಗಳಾದ ಶ್ರೀ ನಾಗೇಶ್ ನೆರಿಯ ಗಗನ್ ಕಣಿಯೂರು, ಗಣೇಶ್ ಗೌಡ ಬನಾರಿ, ಪ್ರದೀಪ್ ನಾಯ್ಕ ಆನಡ್ಕ,ಚರಣ್ ಕೊರಿಂಜ, ಧನಂಜಯ , ದಯಾನಂದ ಬನಾರಿ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *