ಉಜಿರೆ: (ಡಿ.13) ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಉಜಿರೆ ಎಸ್.ಡಿ.ಎಮ್ ಪದವಿ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ “ಬಹುಮಾನ ವಿತರಣಾ” ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ನಡೆಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಇದನ್ನೂ ಓದಿ: ⭕ಪುತ್ತೂರು: ಒಂದೂವರೆ ತಿಂಗಳ ಮಗು ಮೃತ್ಯು
ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಹಾಗೂ ಅಭ್ಯಾಸ್ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಶ್ರೀ ಕಾರ್ತಿಕೇಯ, ಮಂಗಳೂರಿನ ತತ್ವಸಿದ್ಧ ಕಾನೂನು ಸಂಸ್ಥೆಯ ವಕೀಲೆ ಶ್ರೀಮತಿ ಶ್ರದ್ಧಾ ಶೆಟ್ಟಿ, ಅಗ್ರಿಲೀಫ್ ಎಕ್ಸ್ಪೋರ್ಟ್ ಪ್ರೈವೇಟ್ ಲಿಮಿಟೆಡ್ ಸಹ ಸಂಸ್ಥಾಪಕ ಶ್ರೀ ಅತಿಷಯ ಜೈನ್, ಸುದ್ದಿ ಬಿಡುಗಡೆ ಸಂಪಾದಕೀಯ ಸಲಹೆಗಾರ ಶ್ರೀ ರಾಘವ ಶರ್ಮ, BOSCH Automotive Electronics ವ್ಯವಸ್ಥಾಪಕ ಶ್ರೀ ವಿವೇಕ್ ಮರಾಟೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಬಹುಮಾನ ವಿತರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಗುಂಪು ಗಾಯನ, ಕೊಳಲು, ತಬಲ ಹಾಗೂ ವೀಣಾ ವಾದನ ಆಯೋಜಿಸಲಾಗಿತ್ತು.
ಶಾಲಾ ಪ್ರಾಂಶುಪಾಲರಾದ ಮನಮೋಹನ್ ನಾಯ್ಕ್ ಕೆ.ಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ವಿದ್ಯಾರ್ಥಿಗಳಾದ ಕ್ರಿಷ್ಟಿ ಹಾಗೂ ಶಶಾಂಕ್ ಪ್ರಭು ಕಾರ್ಯಕ್ರಮ ನಿರೂಪಿಸಿದರು.


