ಬೆಳಗಾವಿ : ವಿಧಾನಸಭೆಯ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ರಾಜ್ಯದ ಸಮಸ್ಯೆಗಳು, ಹೊಸ ಮಸೂದೆಗಳು ಸೇರಿದಂತೆ ಬಿಸಿ ಬಿಸಿ ಚರ್ಚೆಗಳು, ವಾಕ್ಸಮರಗಳು ಅಧಿವೇಶನದಲ್ಲಿ ಕಂಡು ಬರುತ್ತಿದೆ.

ಇದನ್ನೂ ಓದಿ: ⭕Belthangady: ಜಾತಕ ತೋರಿಸಲು ಬಂದ ಯುವತಿ ಹಿಂದೆ ಬಿದ್ದು ಮದುವೆಯಾಗುವಂತೆ ಕಿರುಕುಳ
ಈ ಮಧ್ಯೆ, ಡಿ. 12ರಂದು ಅಧಿವೇಶನ ಆರಂಭಕ್ಕೂ ಮುನ್ನ ಮುಂಜಾನೆಯ ಸಮಯದಲ್ಲಿ ಕೆ ಸಿ ಎ ಕ್ರೀಡಾಂಗಣದಲ್ಲಿ ಮಾಧ್ಯಮ ಮಿತ್ರರ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷರು ಸೇರಿದಂತೆ ಬಿಜೆಪಿ ಶಾಸಕರು, ಪಕ್ಷದ ಮುಖಂಡರು ಕ್ರಿಕೆಟ್ ಆಡಿ ಗಮನ ಸೆಳೆದಿದ್ದಾರೆ.

ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಅವರ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನವು ಜನರ ಗಮನ ಸೆಳೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವ ಹಂಚಿಕೊಂಡ ಶಾಸಕರು “ಬೆಳಗಾವಿಯ ಅಧಿವೇಶನದ ನಡುವೆ ಬೆಳಗ್ಗೆ ಮಾಧ್ಯಮ ಸ್ನೇಹಿತರ ಜೊತೆ ಬೆಳಗಾವಿಯ ಕೆ ಸಿ ಎ ಕ್ರೀಡಾಂಗಣದಲ್ಲಿ ಬಿಜೆಪಿ ರಾಜ್ಯಧ್ಯಕ್ಷರಾದ ಶ್ರೀ ಬಿ.ವೈ ವಿಜಯೇಂದ್ರ, ಶಾಸಕ ಮಿತ್ರರು,


ಪಕ್ಷದ ಮುಖಂಡರು ಮತ್ತಿತರರೊಂದಿಗೆ ಕ್ರಿಕೆಟ್ ಆಡಿದರು, ಹಲವಾರು ಒತ್ತಡದ ಮಧ್ಯೆ ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ದೇಹಕ್ಕೆ ಉಲ್ಲಾಸ ಮತ್ತು ಮನಸ್ಸಿಗೆ ಸಂತೋಷವನ್ನು ನೀಡಿ ನಮ್ಮ ದೈಹಿಕ ಸಧೃಡತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.” ಎಂದಿದ್ದಾರೆ.


