Sun. Dec 14th, 2025

ಬೆಳ್ತಂಗಡಿ: ಅಂತಾರಾಷ್ಟ್ರೀಯ ಉದ್ಯಮಿ,‌ ಧಾರ್ಮಿಕ ಮುಖಂಡ ಕುಟ್ಟೂರ್ ಹಾಜಿ ಬೆಳ್ತಂಗಡಿಗೆ ಭೇಟಿ

ಬೆಳ್ತಂಗಡಿ: ಕೇರಳದ ಪ್ರಖ್ಯಾತ “ನಾಲೆಡ್ಜ್ ಸಿಟಿ” ಇಲ್ಲಿನ ಗ್ರ್ಯಾಂಡ್ ಮಸ್ಜಿದ್ ಆಫ್ ಇಂಡಿಯಾ “ಜಾಮಿಯಲ್ ಫುತೂಹ್” ಇದರ ಚೇರ್ಮೆನ್, ಅಂತಾರಾಷ್ಟ್ರೀಯ ಉದ್ಯಮಿ ಸಿ.ಪಿ ಅಬ್ದುಲ್ ರಹಿಮಾನ್ ಹಾಜಿ (ಕೂಟ್ಟೂರ್ ಹಾಜಿ) ಅವರು ರವಿವಾರ ಬೆಳ್ತಂಗಡಿಗೆ ಭೇಟಿ ನೀಡಿದರು.

ಇದನ್ನೂ ಓದಿ: 🔴ಧರ್ಮಸ್ಥಳ: ಎಸ್.ಡಿ.ಎಂ ಅನುದಾನಿತ ಪ್ರೌಢಶಾಲೆ ಧರ್ಮಸ್ಥಳದಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ

ಅವರನ್ನು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ನಾಯಕರಾದ ಅಬ್ಬೋನು ಮದ್ದಡ್ಕ, ಖ್ಯಾತ ಉದ್ಯಮಿ ಉಸ್ಮಾನ್ ಹಾಜಿ ಆಲಂದಿಲ, ಹಿರಿಯ ಪತ್ರಕರ್ತ ಹಾಗೂ ಎಸ್‌ವೈಎಸ್ ಝೋನ್ ಮಾಜಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ ಮುಂಡಾಜೆ ಬರಮಾಡಿಕೊಂಡು ಗೌರವಿಸಿದರು.

ಸಿ.ಪಿ‌ ಅಬ್ದುಲ್ ರಹಿಮಾನ್ ಅವರು ಅಬುದಾಬಿಯ ಬನಿಯಾಸ್ ಸ್ಲೈಕ್ ಗ್ರೂಪ್ ಆಫ್ ಕಂಪೆನಿ ಹಾಗೂ ಫಾಲ್ಕನ್ ಇಂಡಸ್ಟ್ರೀಸ್
ಪ್ರೈ ಲಿಮಿಟೆಡ್ ಇದರ ಸಂಸ್ಥಾಪಕರು ಹಾಗೂ ಚೇರ್ಮೆನ್ ಕೂಡ ಆಗಿದ್ದಾರೆ.
ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಉಸ್ತಾದ್ ಅವರ ಅತ್ಯಾಪ್ತರಲ್ಲಿ ಓರ್ವರಾಗಿರುವ ಅವರು ತನ್ನ ಕರ್ನಾಟಕ ಪ್ರವಾಸದ ಮಧ್ಯೆ ಮಾಣಿ ದಾರುಲ್ ಇರ್ಷಾದ್ ಸಂಸ್ಥೆಗೆ ಹಾಗೂ ತೈಬಾ ಗಾರ್ಡನ್ ಈಶ್ವರಮಂಗಳ ಇಲ್ಲಿಗೂ ಭೇಟಿ ನೀಡಿ ಬಳಿಕ ಚಿಕ್ಕಮಗಳೂರಿಗೆ ನಿರ್ಗಮಿಸಿದರು.

Leave a Reply

Your email address will not be published. Required fields are marked *