ಬೆಳ್ತಂಗಡಿ: ಶ್ರೀ ವನಶಾಸ್ತಾರ ದೇವಸ್ಥಾನ ಕಾರಿಂಜ ಬಾಯ್ತಾರು ಉರುವಾಲು ಇಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಬೆಸ್ಟ್ ಫೌಂಡೇಷನ್ ಅಧ್ಯಕ್ಷ ಹಾಗೂ ಬ್ರಹ್ಮ ಕಲಶೋತ್ಸವ ಸಮಿತಿಯ ಗೌರವಸಲಹೆಗಾರರಾದ ಶ್ರೀ ರಕ್ಷಿತ್ ಶಿವರಾಂ ಆಗಮಿಸಿ ತಮ್ಮ ಜೊತೆಗಿದ್ದು ಬ್ರಹ್ಮಕಲಶೋತ್ಸವಕ್ಕೆ ಸಂಪೂರ್ಣವಾಗಿ ಸಹಕರಿಸುವುದಾಗಿ ಹೇಳಿದರು.

ಇದನ್ನೂ ಓದಿ: 🟥ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಸಭೆ
ಈ ಸಂದರ್ಭದಲ್ಲಿ ತಾಲೂಕಿನ ಸರಕಾರಿ ವಕೀಲರಾದ ಮನೋಹರ ಇಳಂತಿಲ,ಕೊರಿಂಜ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಯೋಗೀಶ್ ಪೂಜಾರಿ ಕಡ್ತಿಲ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ದಾಸಪ್ಪ ಗೌಡ ಕೋಡಿಯಡ್ಕ,ವೆಂಕಪ್ಪ ಬರಮೇಲು, ಟ್ರಸ್ಟ್ ನ ಅಧ್ಯಕ್ಷರಾದ ಕೊರಗಪ್ಪ ಪೂಜಾರಿ ಕಾರಿಂಜ, ಗ್ರಾಮ ಪಂಚಾಯತ್ ಸದಸ್ಯರಾದ ಯಶವಂತ ಕಾರಿಂಜ,

ಉಮಾವತಿ ಕೋಡಿಯಡ್ಕ, ಟ್ರಸ್ಟ್ ಸದಸ್ಯರಾದ ಪ್ರಸಾದ್ ಶೆಟ್ಟಿ ಕೆರ್ಪುಣಿ, ಉಮಾವತಿ ಕಾರಿಂಜ, ಓಬಯ್ಯ ಕಾರಿಂಜ, ವಿನೋದರ ಸಾಲ್ಯಾನ್, ಉಪಸ್ಥಿತರಿದ್ದರು. ಬ್ರಹ್ಮ ಕಲಶೋತ್ಸವ ಕಾರ್ಯದರ್ಶಿ ತಾರನಾಥ ಸ್ವಾಗತಿಸಿ ಧರ್ಣಪ್ಪ ನಾಯ್ಕ ಧನ್ಯವಾದ ಸಮರ್ಪಿಸಿದರು.




