Tue. Dec 16th, 2025

ಮಂಜೊಟ್ಟಿ: ಸ್ಟಾರ್ ಲೈನ್ ಶಾಲೆಯಲ್ಲಿ ಸಂಭ್ರಮದ ಫಿಟ್ ಫೆಸ್ಟ್ – 2025 ವಾರ್ಷಿಕ ಕ್ರೀಡಾಕೂಟ

ಮಂಜೊಟ್ಟಿ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ರಝಾ ಗಾರ್ಡನ್ ಮಂಜೊಟ್ಟಿ ಇಲ್ಲಿ 2025- 26 ನೇ ಸಾಲಿನ” ಫಿಟ್ ಫೆಸ್ಟ್ “ವಾರ್ಷಿಕ ಕ್ರೀಡಾಕೂಟವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ರಾಷ್ಟ್ರ ಶಿಕ್ಷಕ ಪ್ರಶಸ್ತಿ ವಿಜೇತ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬಂಗಾಡಿ ಇಲ್ಲಿಯ ಶಿಕ್ಷಕರಾದ ಶ್ರೀಯುತ ಅಮಿತಾನಂದ ಹೆಡ್ಡೆ ಇವರು ನೆರವೇರಿಸಿಕೊಟ್ಟರು.

ಇದನ್ನೂ ಓದಿ: ಉಜಿರೆ:(ಡಿ.22 ) ನವೀಕೃತಗೊಂಡು ಉದ್ಘಾಟನೆಗೆ ಸಿದ್ಧಗೊಂಡಿರುವ ಉಜಿರೆಯ ಸಂತ ಅಂತೋನಿ ಚರ್ಚ್

ಸಭಾ ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀಯುತ ಜನಾಬ್ ಸಯ್ಯದ್ ಹಬೀಬ್ ಸಾಹೇಬ್, ಅತಿಥಿಗಳಾಗಿ ಶಾಲಾ ಆಡಳಿತ ಟ್ರಸ್ಟಿನ ಕಾರ್ಯದರ್ಶಿಯಾದ ಶ್ರೀಯುತ ಸಯ್ಯದ್ ಅಯ್ಯುಬ್, ಕೋಶಾಧಿಕಾರಿಯದ ಶ್ರೀಯುತ ಸಯ್ಯದ್ ಇರ್ಫಾನ್ ಹಾಗೂ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಾಕಿನ್ ಬಿನ್ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯನಿ ಯವರ ಪ್ರಾಸ್ತಾವಿಕ ಮಾತುಗಳೊಂದಿಗೆ ಪ್ರಾರಂಭಗೊಂಡ ಶಾಲಾ ವಿದ್ಯಾರ್ಥಿಗಳ ಪಥಸಂಚಲನ ಕಾರ್ಯಕ್ರಮದಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಮಂಜೊಟ್ಟಿ ನಡ ಇಲ್ಲಿಯ ವಿದ್ಯಾರ್ಥಿಗಳ ಸುಂದರವಾದ ಬ್ಯಾಂಡ್ ಸೆಟ್ ನೀನಾದವು ಕಾರ್ಯಕ್ರಮಕ್ಕೆ ಮುನ್ನುಡಿಯನ್ನು ಹಾಡಿತು. ಕ್ರೀಡಾ ಜ್ಯೋತಿಯ ಆಗಮನದ ಬಳಿಕ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯ ಅತಿಥಿಯವರು ಮಾತನಾಡಿ ” ನಿಷ್ಕಲ್ಮಶ ಮತ್ತು ಹೃದಯ ವೈಶಾಲ್ಯತೆಯ ಮನಸ್ಸಿರುವ ವ್ಯಕ್ತಿಗಳ ಸದೃಢ ಸಾಧನೆಯ ಪ್ರತಿಫಲವೇ ಸ್ಟಾರ್ ಲೈನ್ ವಿದ್ಯಾ ಸಂಸ್ಥೆ. ವಿದ್ಯಾರ್ಥಿಗಳಿಗೆ ನೀಡುತ್ತಿರುವ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಕ್ರೀಡಾ ಲೋಕದ ಸಾಧನೆ ಶಾಲೆಯ ಹೆಸರನ್ನು ಉನ್ನತ ಮಟ್ಟಕ್ಕೇರಿಸಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲಾ ಆಡಳಿತ ಟ್ರಸ್ಟಿನ ಸಂಚಾಲಕರು ” ಆಟ ಮತ್ತು ಪಾಠ ಶಿಕ್ಷಣದ ಎರಡು ಮುಖಗಳಿದ್ದಂತೆ, ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಹೇಳಿ ಕ್ರೀಡಾಕೂಟಕ್ಕೆ ಶುಭವನ್ನು ಕೋರಿದರು. ಅತಿಥಿಗಳು ಶಾಂತಿಯ ಪ್ರತೀಕವಾದ ಪಾರಿವಾಳವನ್ನು ಹಾರಲು ಬಿಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಶಾಲೆಯ ಪುಟಾಣಿ ವಿದ್ಯಾರ್ಥಿಗಳಿಂದ ನಡೆದ ನೃತ್ಯ ವೈಭವವು ಕ್ರೀಡಾಕೂಟಕ್ಕೆ ಹೊಸ ಮೆರುಗನ್ನು ನೀಡಿತು. ಹತ್ತನೇ ತರಗತಿಯ ವಿದ್ಯಾರ್ಥಿ ಮಹಮ್ಮದ್ ಝಿಶಾನ್ ಕಾರ್ಯಕ್ರಮವನ್ನು ನಿರೂಪಿಸಿದರು. ಹತ್ತನೆ ತರಗತಿಯ ಶಿಫಾನ್ ಅತಿಥಿ ಅಭ್ಯಾಗತರನ್ನು ಪ್ರೀತಿಯ ಮಾತುಗಳಿಂದ ಸ್ವಾಗತಿಸಿದರು. ಹತ್ತನೇ ತರಗತಿಯ ವಿದ್ಯಾರ್ಥಿನಿ ಅಫ್ರಾ ಆಶೀಯಾನ ಇವರ ಧನ್ಯವಾದ ಮಾತುಗಳೊಂದಿಗೆ ಉದ್ಘಾಟನಾ ಕಾರ್ಯಕ್ರಮವು ಮುಕ್ತಾಯಗೊಂಡಿತು. ತದನಂತರ ನಡೆದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಆಟೊಟ ಸ್ಪರ್ಧೆಗಳನ್ನು ನಡೆಸಿ ಕಾರ್ಯಕ್ರಮದ ಕೊನೆಯಲ್ಲಿ ಬಹುಮಾನ ವಿತರಣೆಯನ್ನು ಮಾಡಲಾಯಿತು.

Leave a Reply

Your email address will not be published. Required fields are marked *