Mon. Dec 22nd, 2025

ಉಜಿರೆ: ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ ಬೆಳ್ತಂಗಡಿ ರೋಟರಿ ಕ್ಲಬ್ ಗೆ ಅಧಿಕೃತ ಭೇಟಿ

ಉಜಿರೆ: ರೊ. ಪ್ರೊ. ಪ್ರಕಾಶ ಪ್ರಭುಗಳ ಅಧ್ಯಕ್ಷತೆಯಲ್ಲಿ, ಬೆಳ್ತಂಗಡಿ ರೋಟರೀ ಸಂಸ್ಥೆ, ಇದೀಗ ಸೇವಾ ವಲಯದಲ್ಲಿ, ಇಡೀ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ. ಆದರೆ ದೇಶದ ಬೇರೆ ಯಾವುದಾದರೂ ರೋಟರೀ ಕ್ಲಬ್ ಗಳಲ್ಲಿ ನಮಗಿಂತ ಒಳ್ಳೆಯ ಸೇವಾ ಕಾರ್ಯಕ್ರಮ ನಡೆಯುತ್ತಿದ್ದಲ್ಲಿ ಅವುಗಳನ್ನು ಅನುಸರಿಸಿ ಎಂದು ರೋಟರಿ ಸಂಸ್ಥೆಯ 3181 ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ (ರಾಮ್ಕೀ) ಯವರು ನುಡಿದರು. ಅವರು ರೋಟರೀ ಕ್ಲಬ್ ಬೆಳ್ತಂಗಡಿಗೆ ಅಧಿಕೃತ ಭೇಟಿ ನೀಡಿ, ಮೊದಲು ಕ್ಲಬ್ ಅಸೆಂಬ್ಲಿ ನಡೆಸಿ, ಕ್ಲಬ್‌ ನ 1.4 ಕೋಟಿ ರೂಪಾಯಿ ಮೌಲ್ಯದ ಸಾಮಾಜಿಕ ಸೇವೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆನಂತರ ಬೆಳ್ತಂಗಡಿ ಸರಕಾರಿ ಹೈಸ್ಕೂಲಿನ 150 ಮಕ್ಕಳಿಗೆ, ರೋಟರಿ ಬೆಂಗಳೂರು ಇಂದಿರಾ ನಗರದವರು, ಬೆಳ್ತಂಗಡಿ ರೋಟರೀ ಕ್ಲಬ್ ಮುಖಾಂತರ ಕೊಡಮಾಡಲ್ಪಟ್ಟ ಸುಮಾರು 60 ಸಾವಿರ ಮೌಲ್ಯದ ಟೀಶರ್ಟ ಮತ್ತು ಪ್ಯಾಂಟನ್ನು ರಾಮ್ಕೀಯವರು ವಿತರಿಸಿದರು.
ನಂತರ ಕ್ಯಾನ್ ಫಿನ್ ಹೋಮ್ಸ (ಲಿ) ಇವರಿಂದ 18 ಲಕ್ಷ ಹಣ ಮಂಜೂರಾತಿ ಪಡೆದ, ಕಳೆಂಜ ಗ್ರಾಮದಲ್ಲಿರುವ ನಂದಗೋಕುಲ ಗೋ ಶಾಲೆಯ ನೂತನ ಕಟ್ಟಡದ ಉದ್ಘಾಟನೆಯನ್ನು ರಾಮಕೃಷ್ಣರ
ವರು ನಡೆಸಿದರು
ತದನಂತರ ರೋಟರಿ ಕ್ಲಬ್ ಬೆಳ್ತಂಗಡಿಯವರು, ಬೆಳಾಲು ಗ್ರಾಮದ ಪರಂಗಜೆಯಲ್ಲಿ ರೂ 35,000/- ವೆಚ್ಚದಲ್ಲಿ ನಿರ್ಮಿಸಿ ಕೊಟ್ಟ ಬಸ್ ತಂಗುದಾಣವನ್ನು, ರಾಮಕೃಷ್ಣರವರ ಅಧ್ಯಕ್ಷತೆಯಲ್ಲಿ, ಬೆಸ್ಟ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ರವರು ಉದ್ಘಾಟನೆ ಮಾಡಿದರು.

ಸಂಜೆಯ ಸಭಾ ಕಾರ್ಯಕ್ರಮದಲ್ಲಿ ರಾಮಕೃಷ್ಣರವರು ಮಂಗಳೂರು ರೋಟರೀ ಕ್ಲಬ್ ನವರು ವೆನ್ ಲಾಕ್ ಆಸ್ಪತ್ರೆಯಲ್ಲಿ ಎದೆ ಹಾಲು ಸಂಗ್ರಹಣೆಯ ಬ್ಯಾಂಕ್ ನಿರ್ಮಾಣ ಮಾಡಿಕೊಟ್ಟ ಮಾಹಿತಿಯನ್ನು ನೀಡಿದರು. ಬ್ಲಡ್ ಬ್ಯಾಂಕಿನ ರೀತಿಯಲ್ಲಿ ಈ ಎದೆ ಹಾಲಿನ ಸಂಗ್ರಹಣೆಯಿಂದ ಅನೇಕ ನವಜಾತ ಶಿಶುಗಳು ಬದುಕುಳಿದ ಉದಾಹರಣೆಗಳನ್ನು ನೀಡಿದರು. ಇದೇ ರೀತಿ ಎದೆ ಹಾಲು ಸಂಗ್ರಹಣ ಕೇಂದ್ರಗಳನ್ನು ಬೆಂಗಳೂರು ಮತ್ತು ಮೈಸೂರುಗಳಲ್ಲಿ ಸ್ಥಾಪಿಸುವುದಾಗಿ ಹೇಳಿದರು.

ಬೆಳ್ತಂಗಡಿ ರೋಟರೀ ಕ್ಲಬ್ ಅಧ್ಯಕ್ಷ ರೊ. ಪ್ರೊ. ಪ್ರಕಾಶ ಪ್ರಭುಗಳು ಎಲ್ಲರನ್ನು ಸ್ವಾಗತಿಸಿದರು. ಅವರು ತಮ್ಮ ಪ್ರಸ್ತಾವನೆಯಲ್ಲಿ ಬೆಳ್ತಂಗಡಿಯ ಎಲ್ಲಾ ಸೇವಾ ಸಂಸ್ಥೆಗಳ ಪೈಕಿ ಬೆಳ್ತಂಗಡಿ ರೋಟರೀ ಕ್ಲಬ್ ಮುಂಚೂಣಿಯಲ್ಲಿದ್ದು, ಈವರೇಗೆ 1 ಕೋಟಿ ನಾಲ್ವತ್ತು ಲಕ್ಷಗಳಷ್ಚು ಮೌಲ್ಯದ ಸೇವಾ ಕಾರ್ಯಕ್ರಮಗಳು ನಡೆದಿರುವುದಾಗಿ ತಿಳಿಸಿದರು. ಬೆಳ್ತಂಗಡಿ ರೋಟರೀ ಸದಸ್ಯರಾಗುವುದು ಈಗ ನಿಜಕ್ಕೂ ಹೆಮ್ಮೆ ಮತ್ತು ಗೌರವದ ವಿಷಯವಾಗಿದೆ ಎಂದರು.

ರೋಟರೀ ಕ್ಲಬ್ ವತಿಯಿಂದ ಯುವ ಸಾಧಕ, ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜಿನ ಅಧ್ಯಕ್ಷ ಹಾಗೂ ಬೆಳ್ತಂಗಡಿ ರೋಟರೀ ಕ್ಲಬ್ ಸುಮಂತ ಕುಮಾರ್ ಜೈನ್ ಅವರನ್ನು, ಇಂಟರ್ ನ್ಯಾಷನಲ್ ವುಮನ್ ಚೆಸ್ ಚಾಂಪಿಯನ್ ಮತ್ತು ನಮ್ಮ ರೋಟರಿ ಸದಸ್ಯ ಡಾ ಶ್ರೀ ಹರಿ ಹಾಗೂ ಡಾ ವಿದ್ಯಾ ಶ್ರೀ ಹರಿಯವರ ಪುತ್ರ ಇಶಾ ಶರ್ಮ ಅವರನ್ನು, ವೈದ್ಯಕೀಯ ಕ್ಷೇತ್ರದ ಯುವ ಸಾಧಕಿ, ಗಾಯಕಿ ಮತ್ತು ಬೆನಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಧ್ಯಕ್ಷ , ರೋಟರಿಯ ಮಾಜಿ ಅಧ್ಯಕ್ಷ ರೊ. ಡಾ ಗೋಪಾಲ ಕೃಷ್ಣ ಹಾಗೂ ಡಾ ಭಾರತೀ ಗೋಪಾಲಕೃಷ್ಣರ ಪುತ್ರಿ ಡಾ. ಅಂಕಿತಾರವರನ್ನು, ಮುಂಡಾಜೆಯ ಕೃಷಿಕ, ಅಡೂರು ಎಲೆಕ್ಟ್ರಿಕಲ್ಸ ಉದ್ಯಮದ ಮಾಲಕ, ರೋಟರೀ ಕ್ಲಬ್ಬಿನ ಅತ್ಯಂತ ಹಿರಿಯ ಸದಸ್ಯರೂ ಆಗಿರುವ ಅಡೂರು ವೆಂಕಟ್ರಾಯ – ಹೀಗೆ ಒಟ್ಟು ನಾಲ್ಕು ಸಾಧಕರನ್ನು ಗೌರವಿಸಲಾಯಿತು.


ಈ ಬಾರಿಯ ವಿನೂತನ ಯೋಜನೆಯಲ್ಲಿ ರೋಟರಿಗಾಗಿ ರೂ.75,000/- ಕ್ಕಿಂತ ಹೆಚ್ಚು ಈಗಾಗಲೇ ಖರ್ಚು ಮಾಡಿದ ಹಾಗೂ ಮುಂದೆ ಖರ್ಚು ಮಾಡಲಿರುವ ಸದಸ್ಯರುಗಳಾದ ಡಾ.ಶಶಿಧರ್ ಡೋಂಗ್ರೆ,  ಧನಂಜಯ್ ರಾವ್ , ಅನಂತ್ ಭಟ್ ಮಚ್ಚಿಮಲೆ, ವಿದ್ಯಾ ಕುಮಾರ್ ಕಾಂಚೋಡು, ಡಾ.ಗೋಪಾಲ ಕೃಷ್ಣ, ಸುಮಂತ್ ಕುಮಾರ್ ಜೈನ್, ತ್ರಿವಿಕ್ರಮ ಹೆಬ್ಬಾರ್ , ರಾಜಗೋಪಾಲ್ ಭಟ್ ಯು, ಪೂರಣ್ ವರ್ಮ, ಸಂದೇಶ್ ರಾವ್,  ,ಶರತ್ ಕೃಷ್ಣ ಪೆಡ್ವೆಟ್ನಾಯ, ಶ್ರೀಧರ್ ಕೆ.ವಿ., ಶ್ರೀಕಾಂತ ಕಾಮತ್, ಡಾ.ರಾಘವೇಂದ್ರ ಪಿದಮಲೆ,  ಜಯರಾಮ್ ಎಸ್, ಯಶವಂತ ಪಟವರ್ಧನ್, ಕಾರ್ಯದರ್ಶಿ ಡಾ.ದಯಾಕರ್,  ನಮ್ಮ ರೋಟರಿ ಕ್ಲಬ್ ಅಧ್ಯಕ್ಷ ಪ್ರೊ.ಪ್ರಕಾಶ್ ಪ್ರಭು, ಹೀಗೆ ಒಟ್ಟು 18 ಜನರನ್ನು “ಪ್ಲಾಟಿನಂ ಮೆಂಬರ್ 2025-26” ಎಂದು ನಾಮ ಫಲಕ ನೀಡಿ, ಜಿಲ್ಲಾಗವರ್ನರ್ ಗೌರವಿಸಿದರು.


ಅದೇ ರೀತಿ ರೋಟರಿಗಾಗಿ ರೂ 50,000 ಕ್ಕಿಂತ ಹೆಚ್ಚು ಖರ್ಚು ಈಗಾಗಲೆ ಮಾಡಿದ ಹಾಗೂ ಮುಂದೆ ಮಾಡಲಿರುವ ಸದಸ್ಯರುಗಳಾದ ವೆಂಕಟ್ರಾಯ ಅಡೂರ್ , Rtn ನಾರಾಯಣ್ ಪೈ, ಡಾ. ಎ.ಜಯಕುಮಾರ್ ಶೆಟ್ಟಿ, ರತ್ನವರ್ಮ ಜೈನ್, ಬಿ.ಸೋಮಶೇಖರ ಶೆಟ್ಟಿ, ಪ್ರದೀಪ ಕುಮಾರ್ ಶೆಟ್ಟಿ, ಪ್ರೊ.ಕೆ.ಎಮ್.ರಾಧಾ ಕೃಷ್ಣ ಮಯ್ಯ, ಪ್ರತಿಮಾ ಬಿ.ವಿ, ಡಾ.ರೋಹನ್ ದೀಕ್ಷಿತ್,ಡಿ.ಎಂ ಗೌಡ ಹೀಗೆ  ಒಟ್ಟು 10 ಜನರನ್ನು “ಗೋಲ್ಡನ್ ಮೆಂಬರ್ 2025-26” ಎಂದು ನಾಮ ಫಲಕ ನೀಡಿ, ಜಿಲ್ಲಾ ಗವರ್ನರ್ ಗೌರವಿಸಿದರು.


ಜತೆಗೆ ರೋಟರಿಗೆ ಸಂಬಂಧ ಪಟ್ಟ ಜವಾಬ್ದಾರಿಗಳನ್ನು ಅದ್ಭುತವಾಗಿ ನಿರ್ವಹಿಸಿದ ರೋಟರ್ ಮ್ಯಾಗಜೀನ್ ಚೆಯರ್ ಮ್ಯಾನ್ ಕಿರಣ್ ಕುಮಾರ್ ಹೆಬ್ಬಾರ, ಸ್ಕಾಲರ್ ಶಿಪ್ ಮತ್ತು ಪ್ರಾಜೆಕ್ಟ ಚೆಯರ್ ಮ್ಯಾನ್ ಅಬೂಬಕ್ಕರ್ ಯು ಎಚ್ ಹಾಗೂ ಝೋನಲ್ ಲೆವೆಲ್ ಸ್ಪೋರ್ಟ್ಸ ಚೆಯರ್ ಮ್ಯಾನ್ ಆದರ್ಶ ಕಾರಂತ ಇವರನ್ನು ಸ್ಟಾರ್ ಮೆಂಬರ್ 2025-26 ಎಂದು ನಾಮ ಫಲಕ ನೀಡಿ, ಜಿಲ್ಲಾ ಗವರ್ನರ್ ಗೌರವಿಸಿದರು.
ಕಾರ್ಯದರ್ಶಿ ರೊ. ಡಾ ಎಂ ಎಂ ದಯಾಕರ್ ವರದಿ ವಾಚಿಸಿದರು. ಅಸಿಸ್ಟೆಂಟ್ ಗವರ್ನರ್ ರೊ. ಡಾ ಎ ಜಯಕುಮಾರ್ ಶೆಟ್ಟಿ ಮತ್ತು ವಲಯಾಧಿಕಾರಿ ರೊ. ಸುರೇಶ ಸಾಲ್ಯಾನರು ಶುಭಾಂಸನೆ ಗೈದರು. ಮುಂದಿನ ವರ್ಷದ ಅಧ್ಯಕ್ಷ ಶ್ರೀಧರ ಕೆವಿಯವರು ವಂದನಾರ್ಪಣೆಗೈದರು. ವೇದಿಕೆಯಲ್ಲಿ ರೊ. ಶ್ರೀಕಾಂತ ಕಾಮತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *