ಬೆಳ್ತಂಗಡಿ : ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಹಭಾಗಿತ್ವದ ಮೂಡುಬಿದಿರೆಯ ಸೈಂಟ್ ಥೋಮಸ್ ಸಂಸ್ಥೆಯ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬೆಳ್ತಂಗಡಿಯ ಎಸ್.ಡಿ.ಎಂ ಆಂಗ್ಲಮಾಧ್ಯಮ ಶಾಲೆಗೆ ಹಲವು ಪ್ರಶಸ್ತಿಗಳು ಲಭಿಸಿವೆ.

ಇದನ್ನೂ ಓದಿ: 🔷ಉಜಿರೆ: ಎಸ್.ಡಿ.ಎಂ ಸಿಬಿಎಸ್ಇ ಶಾಲೆ ಉಜಿರೆಯಲ್ಲಿ ಪ್ರತಿಭಾ ಕಲರವ “ಕಲಾಬ್ಧಿ – 2025”
9 ತಾಲೂಕುಗಳನ್ನು ಒಳಗೊಂಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಬೆಳ್ತಂಗಡಿ ಎಸ್.ಡಿ.ಎಂ ಆಂಗ್ಲಮಾಧ್ಯಮ ಶಾಲೆಯ 13 ವಿದ್ಯಾರ್ಥಿಗಳು ಬೆಳ್ತಂಗಡಿ ತಾಲೂಕನ್ನು ಪ್ರತಿನಿಧಿಸಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಈ ಪೈಕಿ ನಡೆದ ಜಿಲ್ಲಾ ಮಟ್ಟದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಬೆಳ್ತಂಗಡಿ ಎಸ್.ಡಿ.ಎಂ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡವು ಪ್ರಥಮ ಸ್ಥಾನ ಪಡೆದಿದೆ. ಈ ಮೂಲಕ ಮುಂದೆ ನಡೆಯಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಶಾಲೆಯ 6 ವಿದ್ಯಾರ್ಥಿಗಳಾದ ಪೂರ್ವಿ, ಪ್ರಥ್ವೀ ವಿ ಕುಲಾಲ್, ಶ್ರೀ ರಕ್ಷಾ ಎಮ್, ರಿದು ಎಸ್ ನಾಯ್ಕ್, ಸಂಜನಾ ಎಸ್ ಹಾಗು ತೇಜಸ್ ಆಯ್ಕೆಗೊಂಡಿದ್ದಾರೆ. ವಿಜೇತ ತಂಡಕ್ಕೆ ಶಾಲೆಯ ಸಹ ಶಿಕ್ಷಕಿಯರಾದ ಗೀತಾ ಮತ್ತು ಕಾರುಣ್ಯ ತರಬೇತಿ ನೀಡಿರುತ್ತಾರೆ.

ಇದೇ ದಿನ ನಡೆದ ಕವ್ವಾಲಿ ಗೀತಾ ಸ್ಪರ್ಧೆಯಲ್ಲಿ ಶಾಲೆಯ ತಂಡವು ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ. ತಂಡದಲ್ಲಿ ಅನಘ ಮರಾಟೆ, ಶ್ರೀ ನಂದನ್, ನಿದೀಶ್, ಸಹನಾ, ರಿಶೀತಾ ಮತ್ತು ಶ್ರೇಯಸ್ ಭಾಗವಹಿಸಿದ್ದರು.


ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ಇವರಿಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗು ಶಾಲೆಯ ಶಿಕ್ಷಕರ ವೃಂದ ಮತ್ತು ವಿದ್ಯಾರ್ಥಿ ಸಮೂಹ ಅಭಿನಂದಿಸಿರುತ್ತಾರೆ.


