ಬೆಳಾಲು: ಬೆಳಾಲು ಶ್ರೀ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ಇಲ್ಲಿ ವಾರ್ಷಿಕ ಜಾತ್ರಾಮಹೋತ್ಸವ ಹಾಗೂ ಪರಿವಾರ ದೈವಗಳ ಸಿರಿಸಿಂಗಾರ ನರ್ತನ ಸೇವೆಯು ನಡೆಯಲಿದ್ದು ಊರ ಭಕ್ತಾಭಿಮಾನಿಗಳಿಂದ ಶ್ರೀಕ್ಷೇತ್ರಕ್ಕೆ ಬೆಳಾಲು ಪೇಟೆಯಿಂದ ಭವ್ಯಮೆರವಣಿಗೆಯೊಂದಿಗೆ ಸಾಗಿ ಹಸಿರುವಾಣಿ ಸಮರ್ಪಣೆ ಮಾಡಲಾಯಿತು.

ಶ್ರೀ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿದ ಅಕ್ಷೋಭ್ಯ ಅನ್ನಛತ್ರವನ್ನು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ ಇದರ ಧರ್ಮದರ್ಶಿಗಳಾದ ಶ್ರೀ ಹರೀಶ್ ಗೌಡ ಆರಿಕೋಡಿ ಇವರು ಉದ್ಘಾಟಿಸಿದರು.ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್ ಗೌಡ ಶ್ರೀಸೌಧ ಬೆಳಾಲು,ಜಾತ್ರೋತ್ಸವ ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀ ಲಿಂಗಪ್ಪ ಪೂಜಾರಿ ಬನಂದೂರು,ಅಸ್ರಣ್ಣರಾದ ಶ್ರೀ ಗಿರೀಶ್ ಬಾರಿತ್ತಾಯ ಪಾರಳ,ವ್ಯವಸ್ಥಾಪನಾ ಸಮಿತಿಯ ಉಪಾಧ್ಯಕ್ಷೆ ಶ್ರೀಮತಿ ಮಮತಾ ದಿನೇಶ್ ಪೂಜಾರಿ,
ಪ್ರಧಾನ ಕಾರ್ಯದರ್ಶಿ ಶ್ರೀ ದುರ್ಗಾಪ್ರಸಾದ್ ಕೇರ್ಮುಣ್ಣಾಯ,ಕಾರ್ಯದರ್ಶಿ ಶ್ರೀ ಸತೀಶ್ ಗೌಡ ಎಳ್ಳುಗದ್ದೆ,ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ಶ್ರೀಮತಿ ವಿದ್ಯಾ ಶ್ರೀನಿವಾಸ್,ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಹೇಮಲತಾ ಶ್ರೀನಿವಾಸ್ ಗೌಡ,ಮಾಜಿ ಮಂಡಲ ಪಂಚಾಯತ್ ಅಧ್ಯಕ್ಷರಾದ ಶ್ರೀ ಜತ್ತನ್ನ ಗೌಡ,ಮಾಜಿ ಜಾತ್ರೋತ್ಸವ ಸಮಿತಿಯ ಪ್ರಧಾನ ಸಂಚಾಲಕರು,ವ್ಯವಸ್ಥಾಪನ ಸಮಿತಿಯ ಸದಸ್ಯರು,ಬೈಲುವಾರು ಸಮಿತಿಯ ಸದಸ್ಯರು,ಮಹಿಳಾ ಸಮಿತಿಯ ಸದಸ್ಯರು,ಭಜನಾ ಮಂಡಳಿಯ ಸದಸ್ಯರು ಮತ್ತು ಭಗವಧ್ಭಕ್ತರು ಉಪಸ್ಥಿತರಿದ್ದರು.





