Fri. Dec 26th, 2025

ಉಜಿರೆ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ವಿಜಯ ಗೋಪುರ ಲೋಕಾರ್ಪಣೆಯ ಪೂರ್ವಭಾವಿ ಸಭೆ

ಉಜಿರೆ: ಸುಮಾರು ಒಂದು ಸಾವಿರ ಸುದೀರ್ಘ ಇತಿಹಾಸವುಳ್ಳ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ವಿಜಯ ಗೋಪುರ ಲೋಕಾರ್ಪಣೆಯ ಬಗ್ಗೆ ಪೂರ್ವಭಾವಿ ಸಭೆಯು ಉಜಿರೆ ಶಾರದಾ ಮಂಟಪದಲ್ಲಿ ಡಿ.26 ರಂದು ನಡೆಯಿತು.

ದೇವಸ್ಥಾನದ ಅನುವಂಶಿಯ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ ಅವರು ಎಲ್ಲರನ್ನು ಸ್ವಾಗತಿಸಿ, ಮಾತನಾಡಿ ಮೂರನೇಯ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿದ್ದು, ಕೀರ್ತಿಶೇಷ ವಿಜಯರಾಘವ ಪಡ್ವೆಟ್ನಾಯ ಅವರಿಗೆ ಒಂದು ಕನಸಿತ್ತು, ದೇವಸ್ಥಾನಕ್ಕೆ ಭವ್ಯವಾದ ರಾಜಗೋಪುರ ಆಗಬೇಕೆಂದು, ಅದು ಇಂದು ಎಲ್ಲರ ಸಹಕಾರದಿಂದ ನೆರವೇರಿದೆ ಎಂದು ಹೇಳಿದರು.

ಶಾಸಕ ಹರೀಶ್ ಪೂಂಜ ಮಾತನಾಡಿ, ದೇಶಕ್ಕೆ ಮಾದರಿಯಾಗಿ ಉಜಿರೆ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆಯಲಿದೆ. ಈ ಕಾರ್ಯಕ್ಕೆ ಎಲ್ಲರ ಸಹಕಾರ ಬೇಕು ಎಂದರು.

ಬ್ರಹ್ಮಕಲಶೋತ್ಸವದ ಪೂರ್ಣ ಪ್ರಮಾಣದ ಸಮಿತಿಯನ್ನು ಶರತ್ ಕೃಷ್ಣ ಪಡ್ವೆಟ್ನಾಯ ಅವರು ಘೋಷಣೆ ಮಾಡಿದರು. ಗೌರವ ಮಾರ್ಗದರ್ಶಕರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ‌ ಡಾ.ಡಿ ವೀರೇಂದ್ರ ಹೆಗ್ಗಡೆಯವರು, ಗೌರವಾಧ್ಯಕ್ಷರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ವಿಧಾನ ಪರಿಷತ್ ಶಾಸಕರಾದ ಕೆ.ಪ್ರತಾಪಸಿಂಹ ನಾಯಕ್, ಕಾರ್ಯಾಧ್ಯಕ್ಷರಾಗಿ ಉದ್ಯಮಿ ಶಶಿಧರ ಶೆಟ್ಟಿ ಬರೋಡ, ಪ್ರಧಾನ ಸಂಚಾಲಕರಾಗಿ ಮೋಹನ್ ಕುಮಾರ್ ಆಯ್ಕೆಯಾದರು. ಹಾಗೂ ವಿವಿಧ ಸಮಿತಿ ಸಂಚಾಲಕರು,ಅಧ್ಯಕ್ಷರು,ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ರಾಜಗೋಪುರ ನಿರ್ಮಾಣ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಎಸ್.ಎಸ್, ಉಜಿರೆ ಗ್ರಾ.ಪಂ‌ ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಸಂಚಾಲಕರಾದ ಮೋಹನ ಕುಮಾರ್, ಕೋಶಾಧಿಕಾರಿ ರಾಜೇಶ್ ಪೈ, ಕಾರ್ಯದರ್ಶಿ ಲಕ್ಷ್ಮಣ ಸಫಲ್ಯ, ಶಿವರಾಮ ಪಡ್ವೆಟ್ನಾಯ, ಅನಂತ ಮೋಹನ ಪಡ್ವೆಟ್ನಾಯ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಸೇರಿದ್ದು ಸೂಕ್ತ ಸಲಹೆ ಸೂಚನೆ ನೀಡಿದರು. ಪಿಡಿಓ ಪ್ರಕಾಶ್ ಶೆಟ್ಟಿ ನೊಚ್ಚ ಪ್ರಾಸ್ತಾವಿಕ ಮಾತನಾಡಿದರು, ಸಂಜೀವ ಶೆಟ್ಟಿ ಕುಂಟಿನಿ ಲೆಕ್ಕಪತ್ರ ವಿವರ ತಿಳಿಸಿದರು, ರವೀಂದ್ರ ಶೆಟ್ಟಿ ಬಳಂಜ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *