ಬೆಳ್ತಂಗಡಿ: ಉರುವಾಲು ಗ್ರಾಮದ ಕಾರಿಂಜ ಅಂಗನವಾಡಿ ಕೇಂದ್ರಕ್ಕೆ ಪ್ಯಾರದೀಪ್ ಫಾಸ್ಫೇಟ್ ಲಿಮಿಟೆಡ್ ಮಂಗಳೂರು ಇವರು ಸಿಎಸ್ಆರ್ ಅನುದಾನದಲ್ಲಿ ನೂತನ ಕಟ್ಟಡಕ್ಕೆ ಶಿಲಾನ್ಯಾಸವನ್ನು ಮಾಡಲಾಯಿತು.

ಇದನ್ನೂ ಓದಿ: ⭕ಬೆಳ್ತಂಗಡಿ: ಮೆದುಳಿನ ರಕ್ತ ಸ್ರಾವದಿಂದ ಯುವತಿ ಸಾವು
ಕಂಪನಿಯ ಪ್ರತಿನಿಧಿಗಳಾದ ಸಿ ಎಸ್ ಆರ್ ಸಮನ್ವಯಾಧಿಕಾರಿ ವಿವೇಕ್ ಕೋಟ್ಯಾನ್, ಸಹಾಯಕ ವ್ಯವಸ್ಥಾಪಕರಾದ ರಾಕೇಶ್ , ಅಭಿನಂದನ್ ಆನಡ್ಕ,ಇವರು ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಈಶ್ವರ ಭಟ್ ಮೈಲ್ತೋಡಿ ಹಿರಿಯರಾದ ದಾಸಪ್ಪ ಕೋಡಿಯಡ್ಕ,



ಪಂಚಾಯತ್ ಮಾಜಿ ಅಧ್ಯಕ್ಷ ಯಶವಂತ ಕಾರಿಂಜ ,ಬಾಲ ವಿಕಾಸ ಸಮಿತಿ ಅಧ್ಯಕ್ಷ ಸ್ಮಿತಾ ಕೆ ,ಶಿಶು ಅಭಿವೃದ್ಧಿ ಇಲಾಖೆಯ ಕಣಿಯೂರು ವಲಯದ ಮೇಲ್ವಿಚಾರಕಿ ಸುಮನ ,ಶಾಲೆಯ ಮುಖ್ಯ ಶಿಕ್ಷಕಿ ಗಿರಿಜಾ ,ಶಿಕ್ಷಕರಾದ ಪರಮೇಶ್ವರ, ಅಂಗನವಾಡಿ ಸಹಾಯಕಿ ವಸಂತಿ, ಶಾಲಾ ಅಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷರಾದ ಡೀಕಯ್ಯ ಸಿ ಆನಡ್ಕ,ನಿವೃತ್ತ ಶಿಕ್ಷಕ ಧರ್ಣಪ್ಪ ನಾಯ್ಕ ಆನಡ್ಕ, ಉಪಸ್ಥಿತರಿದ್ದರು.ಅಂಗನವಾಡಿ ಕಾರ್ಯಕರ್ತೆ ಶಶಿಪ್ರಭಾ ಸ್ವಾಗತಿಸಿ, ವಂದನಾರ್ಪಣೆ ಮಾಡಿದರು.


