ಬಂಟ್ವಾಳ: ಗ್ರಾಮಕ್ಕೊಂದು ಮಾದರಿ ಶಾಲೆಯನ್ನಾಗಿ ಮಾಡಿ ಆ ಗ್ರಾಮದಲ್ಲಿರುವ ಕಡಿಮೆ ಮಕ್ಕಳನ್ನು ಹೊಂದಿದ ಶಾಲೆಗಳ ಮಕ್ಕಳನ್ನು ಒಂದೇ ಕಡೆ ಸೇರಿಸಿ ಅವರಿಗೆ ಬೇಕಾದ ವಾಹನ, ಶಿಕ್ಷಕರ ಸೌಲಭ್ಯವು ಒದಗಿಸಿ ಎಲ್ಲರಿಗೂ ಉತ್ತಮ ಶಿಕ್ಷಣ ದೊರಕುವಂತೆ ಮಾಡಬೇಕು, ಸರಕಾರಿ ಶಾಲೆಗಳು ಪ್ರಗತಿ ಹೊಂದಿದಾಗ ಪ್ರತಿಯೊಬ್ಬ ನಾಗರಿಕನು ಶಿಕ್ಷಿತನಾಗಲು ಸಾಧ್ಯ,ಎಂದು ಬಂಟ್ವಾಳ ಕ್ಷೇತ್ರ ಶಾಸಕ ರಾಜೇಶ್ ನಾಯ್ಕ್ ಯು ಹೇಳಿದರು.

ಅವರು ಡಿಸೆಂಬರ್ 27 ನೇ ಶನಿವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಶಂಭೂರು ಇಲ್ಲಿ ಎಂ ಆರ್ ಪಿ ಎಲ್ ಸಂಸ್ಥೆಯ ಅನುದಾನದಿಂದ ನಿರ್ಮಾಣವಾದ ಎರಡು ತರಗತಿ ಕೊಠಡಿಗಳ ಉದ್ಘಾಟನೆ ಹಾಗೂ ಎನ್ ಎಂ ಪಿ ಟಿ ಸಂಸ್ಥೆಯ ಅನುದಾನದಿಂದ ನಿರ್ಮಾಣಗೊಳ್ಳಲಿರುವ ಎರಡು ತರಗತಿ ಕೊಠಡಿಗಳಿಗೆ ಶಿಲನ್ಯಾಸ ಮತ್ತು ಶಾಲಾ ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಎಂ ಆರ್ ಪಿ ಎಲ್ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಮ್ಯಾನೇಜಿಂಗ್ ಮುಖ್ಯಸ್ಥರಾದ ದಯಾನಂದ ಪ್ರಭು ನೂತನ ಕೊಠಡಿಗಳನ್ನು ಉದ್ಘಾಟಿಸಿದರು.
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ರವಿಶಂಕರ್ ಬಡಾಜೆ ಗುತ್ತು ನೂತನವಾಗಿ ನಿರ್ಮಾಣಗೊಳ್ಳಲಿರುವ ಎರಡು ಕೊಠಡಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.
ಬೆಳಿಗ್ಗೆ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಮಕ್ಕಳಿಂದ ಪಥಸಂಚಲನ ಹಾಗೂ ವಿವಿಧ ಕವಾಯತು ಪ್ರದರ್ಶನಗಳು ಜರಗಿತು.
ಉದ್ಘಾಟನಾ ಸಭಾ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸಾಯಂಕಾಲ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ “ಹಿರಾಣ್ಯಾಕ್ಷ ವಧೆ” ಯಕ್ಷಗಾನ ಪ್ರದರ್ಶನ ಪ್ರೇಕ್ಷಕರ ಗಮನಸೆಳೆಯಿತು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ದೈನಂದ ಬಿಎಸ್ ಬಂಡ ಸಾಲೆ, ನರಿಕೊಂಬು ಶ್ರೀ ನಾಲ್ಕೈತ್ತಾಯ ಪಂಜುರ್ಲಿ ನೇಮೋತ್ಸವ ಸಮಿತಿ ಅಧ್ಯಕ್ಷ ಜಗನ್ನಾಥ್ ಬಂಗೇರ ನಿರ್ಮಾಲ್, ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷ ಸಂಜೀವ ಪೂಜಾರಿ ಕುರ್ಚಿಗುಡ್ಡೆ, ಶ್ರೀ ಅರಸು ವೈದ್ಯನಾಥ ಜುಮಾದಿಬಂಟ ಆರಾಧನಾ ಸಮಿತಿ ಜೋಡುಸ್ತಾನ ಗೌರಾಧ್ಯಕ್ಷ ಸೀತಾರಾಮ ಪೂಜಾರಿ, ಬಂಟ್ವಾಳ ತಾಲೂಕು ನಾರಾಯಣ ಗುರು ವಿಚಾರಣ ವೇದಿಕೆ ಅಧ್ಯಕ್ಷ ನವೀನ್ ಕೋಟಿಯಾನ್, ಕರ್ನಾಟಕ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್,

ಪುಲಿಂಚ ಸೇವಾ ಪ್ರತಿಷ್ಠಾನ ಅಧ್ಯಕ್ಷ ಶ್ರೀಧರ ಶೆಟ್ಟಿ ಪುಳಿಂಚ, ಬಜಾರ್ ಗ್ರೂಪ್ ಮಾರ್ನಬೈಲ್ ಆಡಳಿತ ನಿರ್ದೇಶಕ ಲಯನ್ ಸುಧಾಕರ್ ಆಚಾರ್ಯ, ಗುತ್ತಿಗೆದಾರ ಸುದರ್ಶನ್ ಬಜ, ಸಾಮಾಜಿಕ ಕಾರ್ಯಕರ್ತ ಕೃಷ್ಣಪ್ಪ ನಾಟಿ, ಜಿ ಎಸ್ ಬಿಲ್ಡರ್ಸ್ ಮಾಲಕ ಗಣೇಶ್ ಜೆ ಪಿ ಕಲ್ಲಡ್ಕ, ನವೀನ್ ಶೆಟ್ಟಿ ಪಂಜಿಪಾಲ್, ನಿವೃತ್ತ ಶಿಕ್ಷಕಿ ನೀಲಮ್ಮ ಟೀಚರ್, ಲಕ್ಷ್ಮಣ ಪೂಜಾರಿ ಶಾಂತಿಲಾ, ಆನಂದ ಅಡ್ಡದ ಪಾದೆ, ಶಿಕ್ಷಕ ಶಂಕರ್ ನಾರಾಯಣ್, ಮಾಜಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗ್ರಗರಿ ರೋಡ್ರೀ ಗಸ್, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮೋಹಿನಿ ವಾಮನ, ಸದಸ್ಯರುಗಳಾದ ಪ್ರಕಾಶ್ ಮಡಿಮುಗೇರು, ಯೋಗೀಶ್ ಶಾಂತಿಲಾ, ಸವಿತಾ ರಾಮಚಂದ್ರ, ಹೇಮಲತಾ ಕೆ, ಸುಜಾತ ಮಡಿಮುಗೇರು, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ವಿಮಲಾ ಮೊದಲದವರು ಉಪಸ್ಥಿತರಿದ್ದರು.

ಶಾಲಾ ಮಕ್ಕಳು ಪ್ರಾರ್ಥಿಸಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಹೇಮಚಂದ್ರ ಶಂಭೂರ್ ಭಂಡಾರ ಮನೆ, ಸ್ವಾಗತಿಸಿ, ಶಿಕ್ಷಕಿ ಚಿತ್ರ ಶಾಲಾ ವರದಿ ವಾಚಿಸಿ, ಶಾಲಾ ಶಿಕ್ಷಕಿ ಯರುಗಳಾದ ಇಂದಿರಾ, ಮೀನಾಕ್ಷಿ, ಅನಿತಾ, ಉಷಾ, ಚಿತ್ರಾಕ್ಷಿ, ಮಂಜುಳಾ, ಮಾಲಾಶ್ರೀ, ದಯಾವತಿ ಬಹುಮಾನಿತರ ಪಟ್ಟಿ ವಾಚಿಸಿ, ಶಿಕ್ಷಕ ಪವನ್ ಹಾಗೂ ಶಿಕ್ಷಕಿ ಜಯಂತಿ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿ ಶಾಲಾ ಮುಖ್ಯಶಿಕ್ಷಕ ಜಯರಾಮ ಪಡ್ರೆ ವಂದಿಸಿದರು. ಯತೀಶ್ ಪೂಜಾರಿ ಶಂಭೂರ್ ಕಾರ್ಯಕ್ರಮ ನಿರೂಪಿಸಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳು ಸಹಕರಿಸಿದರು.


