Sun. Dec 28th, 2025

ಬೆಳ್ತಂಗಡಿ : ಪ್ರಾಮಾಣಿಕತೆ ಮೆರೆದ ಸಿದ್ದೇಶ್. ಟಿ ದಂಪತಿ – ಪಾರ್ಕಿಂಗ್‌ನಲ್ಲಿ ಸಿಕ್ಕ ಮೂರು ಚಿನ್ನದ ಉಂಗುರಗಳು ಬೆಳ್ತಂಗಡಿ ಪೋಲಿಸ್‌ ಠಾಣೆಗೆ ಹಸ್ತಾಂತರ

ಬೆಳ್ತಂಗಡಿ : ಡಿಸೆಂಬರ್ 27ರಂದು ಸಂಜೆ ಬೆಳ್ತಂಗಡಿ ನಗರದ ಸಂತೆಕಟ್ಟೆಯಲ್ಲಿರುವ ಸಮಡೈನ್ ಹೋಟೆಲ್ ಮೇಲ್ಭಾಗದ ಮಾತೃಶ್ರೀ ಬಟ್ಟೆ ಅಂಗಡಿಗೆ ಸಿದ್ದೇಶ್ ಹಾಗೂ ಪತ್ನಿ ಐಶ್ವರ್ಯ ಅವರು ಬಟ್ಟೆ ಖರೀದಿಸಲು ತೆರಳಿದ್ದರು.

ಇದನ್ನೂ ಓದಿ: ಉಜಿರೆ: ದ.ಕ.ಜಿಲ್ಲಾ ಪ.ಪೂ.ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರ ಸಂಘದ ವತಿಯಿಂದ

ಶಾಪಿಂಗ್ ಮುಗಿಸಿ ವಾಪಸ್ ಬಂದು ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ತಮ್ಮ ಕಾರನ್ನು ಹತ್ತುವ ಸಂದರ್ಭದಲ್ಲಿ, ಕೆಳಗೆ ಬಿದ್ದಿದ್ದ ಮೂರು ಚಿನ್ನದ ಕೈ ಉಂಗುರಗಳು ಐಶ್ವರ್ಯ ಅವರ ಕಣ್ಣಿಗೆ ಬಿದ್ದಿವೆ.

ತಕ್ಷಣವೇ ಅವುಗಳನ್ನು ಪರಿಶೀಲಿಸಿದಾಗ ಅವು ಅಸಲಿ ಚಿನ್ನದ ಉಂಗುರಗಳೆಂದು ದೃಢಪಟ್ಟಿವೆ. ಸ್ವಲ್ಪವೂ ವಿಳಂಬ ಮಾಡದ ದಂಪತಿ, ನೇರವಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ತೆರಳಿ, ಅಲ್ಲಿನ ಅಧಿಕಾರಿಗಳಿಗೆ ಉಂಗುರಗಳನ್ನು ಹಸ್ತಾಂತರಿಸಿದ್ದಾರೆ. ವಾರಸುದಾರರನ್ನು ಪತ್ತೆಹಚ್ಚಿ ಅವರಿಗೆ ಈ ಆಭರಣಗಳನ್ನು ತಲುಪಿಸುವಂತೆ ಮನವಿ ಮಾಡಿದ್ದಾರೆ.


Leave a Reply

Your email address will not be published. Required fields are marked *